ತುರ್ತಾಗಿ ಸಹಾಯ ಮಾಡಿ! ವಿದೇಶಾಂಗ ಇಲಾಖೆಗೆ ಮೊರೆಯಿಟ್ಟ ಸೈನಾ ನೆಹ್ವಾಲ್

ಹೈದರಾಬಾದ್| Krishnaveni K| Last Modified ಮಂಗಳವಾರ, 8 ಅಕ್ಟೋಬರ್ 2019 (09:47 IST)
ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತುರ್ತಾಗಿ ಸಹಾಯ ಬೇಕಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

 
ಡೆನ್ಮಾರ್ಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಲು ಡೆನ್ಮಾರ್ಕ್ ಗೆ ತೆರಳಲು ತಮಗೂ ತಮ್ಮ ತರಬೇತುದಾರರಿಗೂ ವೀಸಾ ಒದಗಿಸಲು ತುರ್ತಾಗಿ ಸಹಾಯ ಮಾಡುವಂತೆ ಸೈನಾ ಮನವಿ ಮಾಡಿದ್ದಾರೆ.
 
ಮುಂದಿನ ಮಂಗಳವಾರ ನಮಗೆ ಪಂದ್ಯವಿದೆ. ಆದರೆ ನಮ್ಮ ವೀಸಾ ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ತೊಂದರೆಯಾಗುತ್ತಿದೆ. ಸಹಾಯ ಮಾಡಿ ಎಂದು ಸೈನಾ ಮೊರೆಯಿಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :