ಡರ್ಬನ್ನಲ್ಲಿ ಮೈದಾನದಲ್ಲಿ ರನ್ನುಗಳ ಸುರಿಮಳೆ ಸುರಿಸಿ ಹೀರೋ ಪಟ್ಟ ಅಲಂಕರಿಸತೊಡಗಿರುವ ಯುವರಾಜ್ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ದೊರೆತಿಲ್ಲ ಎಂಬ ಕೊರಗು ಕಾಡುತ್ತಿದೆಯೇ?ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಪ್ರಕಾರ, ಹೌದು. ಈ ವಿಷಯದಲ್ಲಿ ಮಗ ತಮ್ಮ ಬಳಿ ಒಮ್ಮೆಯೂ ವಿಷಯವೆತ್ತಿಲ್ಲ, ಆದರೆ ನಾಯಕತ್ವ ವಿಷಯದಲ್ಲಿ ತಮ್ಮ ಮಗನನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ ಅವರು.ಆದರೂ ನಾಯಕತ್ವವೇ ಪ್ರಧಾನ ಅಲ್ಲ, ದೇಶದ ತಂಡಕ್ಕಾಗಿ ಆಟದ ಮೇಲೆ ಗಮನ ಕೇಂದ್ರೀಕರಿಸುವುದು