ಅಂಪೈರ್ ಸ್ಟೀವ್ ಬಕ್ನರ್ ಆಶಿರ್ವಾದ ಇರುವವರೆಗೆ ಆಸ್ಟ್ರೇಲಿಯ ತಂಡವು ಚಾಂಪಿಯನ್ ತಂಡವಾಗಿ ಮೆರೆಯಲಿದೆ. ಸಿಡ್ನಿ ಪಂದ್ಯದಲ್ಲಿ ಬಕ್ನರ್ ನೀಡಿದ ಅನ್ಯಾಯದ ತೀರ್ಪುಗಳ ಬಲದ ಮೇಲೆ ಆಸ್ಟ್ರೇಲಿಯ, ಟೀಮ್ ಇಂಡಿಯಾವನ್ನು 122 ರನ್ಗಳ ಅಂತರದಲ್ಲಿ ಸೋಲಿಸಿ, ನಾಲ್ಕು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಮೂರನೆ ಟೆಸ್ಟ್ ಪಂದ್ಯವು ಪರ್ಥ್ನಲ್ಲಿ ಜನವರಿ 16ರಿಂದ ಪ್ರಾರಂಭವಾಗಲಿದೆ. ಸಭ್ಯರ ಆಟ ಎಂದು ಹೆಸರು ಪಡೆದ ಕ್ರಿಕೆಟ್ಗೆ ಅರವತ್ತರ ಅರಳು ಮರಳಿನ ಬಕ್ನರ್ ಅಪವಾದವಾದರು.