ಮುರಳಿ ಚೆಂಡನ್ನು ಎಸೆಯುತ್ತಿದ್ದರು: ಗಿಲ್‌ಕ್ರಿಸ್ಟ್

ಸಿಡ್ನಿ| ಇಳಯರಾಜ|
ಆಸ್ಟ್ರೇಲಿಯಾದ ಮಾಜಿ ಉಪಕಪ್ತಾನ ಆಡಮ್ ಗಿಲ್‌ಕ್ರಿಸ್ಟ್ ತನ್ನ ಮತ್ತಷ್ಟು ಮುಂದುವರಿದ ದಾಳಿಯಲ್ಲಿ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರನ್ನು 'ಚಕ್ಕರ್' ಹಾಗೂ 90ರ ದಶಕದಲ್ಲಿ ಕ್ರಿಕೆಟ್ ಜಗತ್ತಿನಲ್ಲೂ ಕರಿಯರು ಮತ್ತು ಬಿಳಿಯರು ಎಂದು ಬೇಧ ಹುಟ್ಟು ಹಾಕಿದ್ದು ಶ್ರೀಲಂಕಾ ಎಂದು ಅವರು ದೂರಿದ್ದಾರೆ.

ತನ್ನ ಆತ್ಮಚರಿತ್ರೆ 'ಟ್ರೂ ಕಲರ್ಸ್'ನಲ್ಲಿ ಗಿಲ್‌ಕ್ರಿಸ್ಟ್, ಮುರಳೀಧರನ್ ಚೆಂಡನ್ನು ಎಸೆಯುತ್ತಾರೆ ಎಂಬುದು ನಿಸ್ಸಂಶಯ ಮತ್ತು ಇದು ವಿವಾದವಾದಾಗ ಶ್ರೀಲಂಕಾ ಪ್ರತಿನಿಧಿಗಳು ಐಸಿಸಿಯ ಪ್ರಶ್ನೆಗಳಿಗೆ ವಿವರಣೆ ನೀಡಿ, ಇದೊಂದು 'ವರ್ಣಬೇಧ ನೀತಿ'ಯ ಭಾಗ ಎಂದು ಆರೋಪಿಸಿದ ನಂತರ ಐಸಿಸಿ ಆತನ ರಕ್ಷಣೆಗೆ ನಿಂತಿತ್ತು ಎಂದು ಅವರು ಬರೆದಿದ್ದಾರೆ.

"ಅವರು ಬಾಲನ್ನು ಎಸೆಯುತ್ತಾರಾ? ನಾನು ಕೆಲವು ಕ್ಷಣ ಯೋಚಿಸಿ ಎಚ್ಚರಿಕೆಯಿಂದ ಹೇಳಿದೆ, 'ನನ್ನ ಪ್ರಕಾರ ಹೌದು' ಎಂದೆ" ಎಂದು ಪ್ರಶ್ನೆಯೊಂದು ಎದುರಾದುದನ್ನು ಪುಸ್ತಕದಲ್ಲಿ ಗಿಲ್ಲಿ ನಮೂದಿಸಿದ್ದಾರೆ.
"ನೀವು ಆಟದ ನಿಯಮಗಳನ್ನು ಓದಿದರೆ ಮುರಳಿ ಮತ್ತು ಕ್ರಿಕೆಟ್ ಇತಿಹಾಸದಲ್ಲಿ ಕೆಲವರು ಸೇರಿದಂತೆ ಆ ಬಗ್ಗೆ ಈ ವಿಚಾರದಲ್ಲಿ ಸಂಶಯವೇ ಉಳಿದಿರುವುದಿಲ್ಲ" ಎಂದು ಅವರು ಬರೆದಿದ್ದು, "ಮುರಳಿ ಮತ್ತು ಆಟದ ಬಗ್ಗೆ ಸ್ಪಷ್ಟಪಡಿಸಲು ಇದು ನನಗೊಂದು ಅವಕಾಶ. ನಾನು ನನ್ನ ಹೇಳಿಕೆಗಳಿಂದ ವಾಪಾಸು ಬರಲಾರೆ. ಖಂಡಿತಾ ಇದು ವೈಯಕ್ತಿಕ ಆರೋಪಗಳು ಎಂದು ನನಗನ್ನಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ಅವರು ಟೆಸ್ಟ್ ಕ್ರಿಕೆಟ್ ಆಡಲು ಆರಂಭಿಸಿದ 1990ರ ಮಧ್ಯದಿಂದ ನನ್ನ ಪ್ರಕಾರ ಅವರ ಕೈ ನಿಯಮಕ್ಕಿಂತ ಹೆಚ್ಚು ನೇರವಾಗಿರುತ್ತದೆ. ಆ ಬಗ್ಗೆ ನನಗೆ ಸಂಶಯವೇ ಇಲ್ಲ. ಸಂಶಯಾಸ್ಪದ ಬೌಲಿಂಗ್ ವಿಚಾರವನ್ನು ಪ್ರಸ್ತಾಪ ಮಾಡಿದಾಗ ಶ್ರೀಲಂಕಾ ಅದನ್ನು ವರ್ಣಬೇಧ ನೀತಿಯನ್ನಾಗಿ ಪರಿವರ್ತಿಸಿತು. ಆದರೆ ನಿಜವಾಗಿಯೂ ಅವರ ಕೈ ನೇರವಾಗಿರುತ್ತದೆಯೇ? - ಎಂದಿದ್ದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಅರ್ಜುನ್ ರಣತುಂಗಾ ಸೇರಿದಂತೆ ಎಲ್ಲರೂ ತಿರುಗಿ ಬಿದ್ದರು. ಹೊರನಡೆಯುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಕ್ರೀಡೆಯಲ್ಲಿ 'ಬಿಳಿಯ' ಮತ್ತು 'ಕರಿಯ'ರ ರಾಷ್ಟ್ರಗಳು ಎಂಬ ಬೇಧ ಹುಟ್ಟಿ ಹಾಕಿದರು. ಈ ವರ್ಣಬೇಧ ಹುಟ್ಟಲು ಕಾರಣ ಮುರಳಿಯವರ ಬೌಲಿಂಗ್ ಶೈಲಿಯನ್ನು ಪ್ರಶ್ನಿಸಿದ್ದಾಗಿತ್ತು" ಎಂದು ಗಿಲ್‌ಕ್ರಿಸ್ಟ್ ತನ್ನ ಆತ್ಮಚರಿತ್ರೆಯಲ್ಲಿ ವಿವರವಾಗಿ ಬರೆದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :