100ನೇ ಶತಕ ಕೇವಲ ಅಂಕಿ ಮಾತ್ರ: ಇದು ಮಾಸ್ಟರ್ ನುಡಿ..!

ನವದೆಹಲಿ, ಶುಕ್ರವಾರ, 18 ನವೆಂಬರ್ 2011 (18:21 IST)

ಸಚಿನ್‌ ತೆಂಡುಲ್ಕರ್‌
WD
WD
ಭಾರತದ ಕ್ರಿಕೆಟ್‌ ಪ್ರೇಮಿಗಳ ಆರಾಧ್ಯ ದೈವವಾಗಿರುವ ಸಚಿನ್‌ ತೆಂಡುಲ್ಕರ್ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ ಮುಂದಿನ ವಾರ ನಡೆಯಲಿರುವ ಅಂತಿಮ ಟೆಸ್ಟ್‌ನಲ್ಲಿ ತಮ್ಮ ನೂರನೇ ಶತಕ ದಾಖಲಿಸುವುದಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸಚಿನ್‌ ಅವರ ಪ್ರಕಾರ ಇದೊಂದು ಅಂಕಿ ಸಂಖ್ಯೆಯ ಲೆಕ್ಕಾಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಸಚಿನ್‌ ತೆಂಡುಲ್ಕರ್‌ ಅವರು ನೂರನೇ ಶತಕ ದಾಖಲಿಸಿ ದಾಖಲೆ ನಿರ್ಮಿಸುವುದನ್ನು ನೋಡಲು ಅವರ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರೂ ಸಚಿನ್‌ ಮಾತ್ರ ನಿರಾಳರಾಗಿದ್ದಂತೆ ಕಂಡು ಬಂದರು.

ನೂರನೇ ಶತಕ ಬರೀ ಅಂಕಿ ಅಂಶ ಎಂದು ನನಗನ್ನಿಸುತ್ತದೆ ಎಂದು ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಯಶಸ್ವೀ ಬ್ಯಾಟ್ಸ್‌ಮನ್‌ ಎನಿಸಿರುವ ಸಚಿನ್‌ ತೆಂಡುಲ್ಕರ್‌ ತಿಳಿಸಿದ್ದಾರೆ.

ನಾನು ನೂರನೇ ಶತಕದ ಬಗ್ಗೆ ಯೋಚಿಸುತ್ತಿಲ್ಲ. ಉತ್ತಮವಾಗಿ ಕ್ರಿಕೆಟ್‌ ಆಡುವ ಕುರಿತು ಯೋಚಿಸುತ್ತಿದ್ದೇನೆ. ನಾನೀಗ ನನ್ನ ಆಟವನ್ನು ಆನಂದಿಸುತ್ತೇನೆ ಎಂದು ತೆಂಡುಲ್ಕರ್ ವಿವರಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್‌ 22ರಂದು ಆರಂಭವಾಗಲಿರುವ ಭಾರತ- ವೀಂಡೀಸ್‌ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಸಚಿನ್‌ ಅವರು ನೂರನೇ ಶತಕ ದಾಖಲಿಸಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್‌ ಅನಗತ್ಯ ಗಡಿಬಿಡಿಯ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ನಾನು ನನ್ನ 90ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದಾಗ ಯಾರೊಬ್ಬರೂ ಏನೂ ಹೇಳಲಿಲ್ಲ, ನನ್ನ 99ನೇ ಶತಕಕ್ಕೆ ಮುನ್ನವೂ ಸಹಾ ಯಾರೊಬ್ಬರೂ ಏನೂ ಹೇಳಿರಲಿಲ್ಲ. ಆದರೆ ಈಗೇಕೆ ಅದರ ಬಗ್ಗೆ ಚಿಂತಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ ಎಂದು ಸಚಿನ್‌ ತಿಳಿಸಿದ್ದಾರೆ.

ಪ್ರತಿಯೊಬ್ಬರೂ ನನ್ನ 100ನೇ ಶತಕದ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಿದ್ದಾರೆ ಎಂದು ನನಗೆ ಗೊತ್ತು. ಆದರೆ ಇದು ಯಾವಾಗ ನಡೆಯಬೇಕು ಎಂಬುದನ್ನು ಕ್ರಿಕೆಟ್‌ ನಿರ್ಧರಿಸಲಿದೆ. ನಾನು ಶತಕ ಗಳಿಸುವ ಧಾವಂತದಲ್ಲಿ ಕ್ರಿಕೆಟ್‌ ಆಡುವುದಿಲ್ಲ. ಸಹಜವಾಗಿಯೇ ಕ್ರಿಕೆಟ್‌ ಆಡುತ್ತೇನೆ ಎಂದು ಸಚಿನ್‌ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...