ಒಮ್ಮೆ ಈ ಸೀರಿಯಲ್ ಮುಗಿಸಿ..! ಅಗ್ನಿಸಾಕ್ಷಿ, ಪುಟ್ಟಗೌರಿ ಮದುವೆ ಹಿಂದೆ ಬಿದ್ದ ವೀಕ್ಷಕರು

ಬೆಂಗಳೂರು| Krishnaveni K| Last Modified ಗುರುವಾರ, 10 ಜನವರಿ 2019 (09:45 IST)
ಬೆಂಗಳೂರು: ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ, ಪುಟ್ಟಗೌರಿ ಮದುವೆ ಧಾರವಾಹಿ ಶುರುವಾಗಿ ಆರೇಳು ವರ್ಷವಾದರೂ ಮುಗಿಯುವ ಸೂಚನೆಯೇ ಕಾಣುತ್ತಿಲ್ಲ. ಈ ಎರಡು ಧಾರವಾಹಿಗಳು ಇತ್ತೀಚೆಗೆ ಬೋರ್ ಹೊಡೆಸುತ್ತಿರುವುದು ನೋಡಿ ವೀಕ್ಷಕರೇ ಒಮ್ಮೆ ಇವೆರಡಕ್ಕೆ ಇತಿಶ್ರೀ ಹಾಡಿ ಎಂದು ಒತ್ತಾಯಿಸಲು ಆರಂಭಿಸಿದ್ದಾರೆ.

ಅಗ್ನಿಸಾಕ್ಷಿ ಶುರುವಾದ ಮೇಲೆ ನಮ್ಮ ರಾಜ್ಯ ಆರು ಮಂದಿ ಮುಖ್ಯಮಂತ್ರಿ ಕಂಡಿದ್ದೇವೆ. ಇನ್ನೂ ಈ ಧಾರವಾಹಿ ಮುಗಿಯುವ ಸೂಚನೆ ಕಾಣುತ್ತಿಲ್ಲವಲ್ಲ ಎಂದು ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಹಿಡಿಶಾಪ ಹಾಕುತ್ತಿದ್ದಾರೆ.ಅಗ್ನಿಸಾಕ್ಷಿ ಮಹಾಸಂಚಿಕೆ ಬಂದ ಮೇಲಂತೂ ಕೆಲವು ಕಿಡಿಗೇಡಿಗಳೇ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಗ್ನಿಸಾಕ್ಷಿ ಮುಗಿಯಿತು ಎಂದು ಇತಿಶ್ರೀ ಹಾಡುತ್ತಿದ್ದಾರೆ. ಅತ್ತ ಪುಟ್ಟ ಗೌರಿಯದ್ದೂ ಇದೇ ಕತೆ.ಈ ಧಾರವಾಹಿ ಟ್ರೋಲ್ ಆದಷ್ಟು ಇನ್ಯಾವುದೂ ಆಗಿರಲ್ಲ. ಇತ್ತೀಚೆಗೆ ಲೀಡಿಂಗ್ ಪಾತ್ರಗಳಾದ ಗೌರಿ, ಮಹೇಶನ ಬಿಟ್ಟು ಕತೆ ಮಂಗಳ ಗೌರಿ ಎಂಬ ಪಾತ್ರದ ಮೇಲೇ ಸಾಗುತ್ತಿದೆ. ಇದನ್ನು ನೋಡಿದ ಮೇಲಂತೂ ಅಭಿಮಾನಿಗಳ ಸಹನೆಯ ಕಟ್ಟೆಯೊಡೆದಿದೆ. ಟೈಟಲ್ ಗೂ, ಕತೆಗೂ ಸಂಬಂಧವೇ ಇಲ್ಲ. ಟ್ವಿಸ್ಟ್ ಇಲ್ಲ, ಕನ್ ಕ್ಲೂಷನ್ ಇಲ್ಲ.. ಇನ್ನೂ ಯಾಕೆ ಈ ಧಾರವಾಹಿ ಪ್ರಸಾರ ಮಾಡುತ್ತಿದ್ದೀರಾ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :