ಹ್ಯಾಂಡ್ಸಪ್ ಸ್ಟೆಪ್ ಹಾಕಿದ ಚಂದನ್ ಆಚಾರ್: ವಿವಾದದಲ್ಲಿ ಬಿಗ್ ಬಾಸ್

ಬೆಂಗಳೂರು| Krishnaveni K| Last Modified ಬುಧವಾರ, 18 ಡಿಸೆಂಬರ್ 2019 (10:10 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸಪ್ ಸಾಂ‍ಗ್ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಅದರ ಸಿಗ್ನೇಚರ್ ಸ್ಟೆಪ್ ಈಗ ವೈರಲ್ ಆಗಿದೆ. ಆದರೆ ಬಿಗ್ ಬಾಸ್ ಮನೆಯೊಳಗಿರುವ ಸದಸ್ಯರಿಗೆ ಇದರ ಬಗ್ಗೆ ಗೊತ್ತಿರಲು ಸಾಧ್ಯವಿಲ್ಲ.

 
ಹಾಗಿದ್ದರೂ ಸ್ಪರ್ಧಿ ಚಂದನ್ ಆಚಾರ್ ನಿನ್ನೆ ದಿನ ಬೆಳಿಗ್ಗೆ ಹ್ಯಾಂಡ್ಸಪ್ ಹಾಡು ಹಾಕಿದಾಗ ಆ ಹಾಡಿನಲ್ಲಿರುವ ಸ್ಟೆಪ್ ಹಾಕಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ದರೆ ಮನೆಯೊಳಗಿದ್ದ ಚಂದನ್ ಗೆ ಈ ಹಾಡು ತೋರಿಸಿದ್ದು ಯಾರು? ಈ ಹಾಡಿನ ಸ್ಟೆಪ್ ಅವರಿಗೆ ಹೇಗೆ ಗೊತ್ತಾಯಿತು ಎಂದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
 
ಕೆಲವರು ಚಂದನ್ ಆಚಾರ್ ಪರ ಮಾತನಾಡಿದ್ದು ಈ ಸಿನಿಮಾದಲ್ಲಿ ಚಂದನ್ ಪಾತ್ರ ಮಾಡಿದ್ದಾರೆ. ಅಷ್ಟೇ ಅಲ್ಲ, ರಕ್ಷಿತ್ ಶೆಟ್ಟಿ ಜತೆಗೆ ಹಲವು ವರ್ಷಗಳಿಂದ ಇದ್ದಾರೆ. ಹೀಗಾಗಿ ಅವರು ಹಾಡಿನ ಚಿತ್ರೀಕರಣ ನೋಡಿರುತ್ತಾರೆ. ಹಾಗಾಗಿಯೇ ಈ ಸ್ಟೆಪ್ ಹಾಕಿರುತ್ತಾರೆ ಎಂದು ಸಮರ್ಥನೆ ನೀಡುತ್ತಿದ್ದಾರೆ. ಹಾಗಿದ್ದರೂ ಚಂದನ್ ಹಾಕಿದ ಆ ಸ್ಟೆಪ್ ಈಗ ಚರ್ಚೆಯ ವಸ್ತುವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :