ಜನಪ್ರಿಯತೆಯಲ್ಲಿ ಏರಿದ ಶೈನ್ ಶೆಟ್ಟಿ, ಇಳಿದ ವಾಸುಕಿ: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಕ್ಕೆ?

ಬೆಂಗಳೂರು| Krishnaveni K| Last Modified ಶನಿವಾರ, 23 ನವೆಂಬರ್ 2019 (08:53 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಟಾಸ್ಕ್ ಈ ವಾರ ಜನಕ್ಕೆ ಬೋರ್ ಎನಿಸಿತ್ತು. ಆದರೆ ಸ್ಪರ್ಧಿಗಳ ಜನಪ್ರಿಯತೆಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ.

 
ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾದ ಶೈನ್ ಶೆಟ್ಟಿ ಟಾಸ್ಕ್ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ಅವರ ಕಾರ್ಯವೈಖರಿ ಜನರಿಗೆ ಮೆಚ್ಚುಗೆಯಾಗಿದ್ದು, ಈ ವಾರ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಆದರೆ ಅತ್ತ ಇದುವರೆಗೆ ವೀಕ್ಷಕರ ಫೇವರಿಟ್ ಆಗಿದ್ದ ವಾಸುಕಿ ವೈಭವ್ ಈ ವಾರ ಕೊಂಚ ಓವರ್ ಆಕ್ಟಿಂಗ್ ಮಾಡಿದರು ಎಂದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ.
 
ಇದರ ನಡುವೆ ಇಂದು ಮತ್ತೆ ನಾಳೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಈ ವಾರ ಮನೆಯಿಂದ ಯಾರು ಹೊರಹೋಗಬಹುದು ಎಂಬ ಲೆಕ್ಕಾಚಾರ ನಡೆದಿದೆ. ಈ ವಾರ ಹೊರ ಹೋಗಲು ಕುರಿ ಪ್ರತಾಪ್, ಸುಜಾತ, ಚಂದನ್ ಆಚಾರ್, ದೀಪಿಕಾ ದಾಸ್ ಮತ್ತು ಕಿಶನ್ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಸುಜಾತ ಅಥವಾ ದೀಪಿಕಾ ದಾಸ್ ಮೇಲೆ ಅಪಾಯದ ತೂಗುಗತ್ತಿಯಿದೆ. ಭಾನುವಾರ ಎಲಿಮಿನೇಷನ್ ಆದವರು ಯಾರು ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :