ಬಿಗ್ ಬಾಸ್ ಕನ್ನಡ: ಈ ವಾರ ಸುಜಾತ, ಮುಂದಿನ ವಾರ ಈ ಸ್ಪರ್ಧಿ ಹೊರಬರಲಿ ಎಂದ ವೀಕ್ಷಕರು!

ಬೆಂಗಳೂರು| Krishnaveni K| Last Modified ಸೋಮವಾರ, 25 ನವೆಂಬರ್ 2019 (09:36 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಸುಜಾತ. ನಿನ್ನೆ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಎಲಿಮಿನೇಟ್ ಆದ ಸ್ಪರ್ಧಿಯ ಹೆಸರು ಬಹಿರಂಗಪಡಿಸಿದರು.
 

ಕಾಲಿಗೆ ಏಟು ಬಿದ್ದ ಬಳಿಕ ಸುಜಾತ ಟಾಸ್ಕ್ ಗಳಲ್ಲಿ ಅಷ್ಟೊಂದು ಕ್ರಿಯಾಶೀಲರಾಗಿರಲಿಲ್ಲ. ಅದಲ್ಲದೆ, ಅವರ ಕೆಲವೊಂದು ವರ್ತನೆಗಳು ವೀಕ್ಷಕರಿಗೆ ಇಷ್ಟವಾಗುತ್ತಿರಲಿಲ್ಲ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಲೇ ಇದ್ದರು.
 
ಇದೀಗ ಸುಜಾತ ಮನೆಯಿಂದ ಹೊರಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವೀಕ್ಷಕರು ಸುಜಾತ ಬಂದಿದ್ದು ಒಳ್ಳೆದಾಯ್ತು. ಬಿಗ್ ಬಾಸ್ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ವಾರ ಭೂಮಿ  ಶೆಟ್ಟಿ ಹೊರಗೆ ಬರಲಿ. ಆಕೆ ಡವ್ ಮಾಡ್ತಿದ್ದಾಳೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಾರ ವಾಸುಕಿ ಮೇಲೆ ವಿನಾಕಾರಣ ಡಾಮಿನೇಟ್ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಈ ವಾರ ನಾಮಿನೇಟ್‍ ಆದರೆ ಭೂಮಿಗೆ ಕಷ್ಟ ತಪ್ಪಿದ್ದಲ್ಲ.
ಇದರಲ್ಲಿ ಇನ್ನಷ್ಟು ಓದಿ :