Widgets Magazine

ಬಿಗ್ ಬಾಸ್ ಕನ್ನಡ: ಹಿಂದೆಯೇ ಸುತ್ತುತ್ತಿದ್ದ ಭೂಮಿ ಶೆಟ್ಟಿಗೆ ವಾಸುಕಿ ವೈಭವ್ ಹೀಗೆ ಮಾಡಿದ್ದು ಸರೀನಾ?

ಬೆಂಗಳೂರು| Krishnaveni K| Last Modified ಮಂಗಳವಾರ, 26 ನವೆಂಬರ್ 2019 (11:05 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ನಾಮಿನೇಟ್ ಪ್ರಕ್ರಿಯೆ ಕೊಂಚ ವಿಭಿನ್ನವಾಗಿತ್ತು. ಆದರೆ ಸದಾ ತಮ್ಮ ಸ್ವಂತ ಎಂದು ಓಡಾಡುತ್ತಿದ್ದ ಭೂಮಿ ಶೆಟ್ಟಿಗೆ ವಾಸುಕಿ ಈ ವಾರ ಅಕ್ಷರಶಃ ಶಾಕ್ ಕೊಟ್ಟಿದ್ದಾರೆ.

 
ಈ ವಾರ ಪ್ರತೀ ಸದಸ್ಯರೂ ತಾವು ನಾಮಿನೇಟ್ ಮಾಡುವ ಸದಸ್ಯರಿಗೆ ಒಂದರಿಂದ ನಾಲ್ಕು ಅಂಕ ಕೊಡಬೇಕಿತ್ತು. ಅದರಂತೆ ಯಾರಿಗೆ ಹೆಚ್ಚು ಅಂಕ ಸಿಗುತ್ತದೋ ಅವರು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಒಟ್ಟು ಆರು ಸದಸ್ಯರು ಈ ವಾರ ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಶೈನ್ ಶೆಟ್ಟಿ ನೇರವಾಗಿ ನಾಮಿನೇಟ್ ಆಗಿದ್ದಾರೆ.
 
ತಮ್ಮ ಸರದಿ ಬಂದಾಗ ವಾಸುಕಿ ಭೂಮಿ ಹೆಸರನ್ನು ಸೂಚಿಸಿದ್ದು, ವಿಪರೀತ ಕೋಪ ಮಾಡಿಕೊಳ್ಳುವ ಕಾರಣಕ್ಕೆ ಅವರ ಹೆಸರು ಹೇಳುತ್ತಿದ್ದೇನೆ ಎಂದಿದ್ದಾರೆ. ಕಳೆದ ವಾರ ಟಾಸ್ಕ್ ನಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಭೂಮಿ ವಾಸುಕಿ ಮೇಲೆ ಸಿಟ್ಟಾಗಿದ್ದರು. ಅಲ್ಲದೆ, ತನ್ನನ್ನು ಬಿಟ್ಟು ಚಂದನಾ ಹಿಂದೆ ಹೋಗುತ್ತಿದ್ದೀಯಾ ಎಂದೆಲ್ಲಾ ಆರೋಪ ಮಾಡಿದ್ದರು. ಬಹುಶಃ ಇದೇ ಕಾರಣಕ್ಕೆ ವಾಸುಕಿ ತಮ್ಮ ಆಪ್ತೆಯಾಗಿದ್ದರೂ ಭೂಮಿ ಹೆಸರನ್ನು ನಾಮಿನೇಟ್ ಮಾಡಿದ್ದಾರೆ.
 
ಒಟ್ಟಾರೆ ಈ ವಾರ ನಾಮಿನೇಟ್ ಆದವರು ರಾಜು ತಾಳಿ ಕೋಟೆ, ಭೂಮಿ ಶೆಟ್ಟಿ, ಚಂದನ್ ಆಚಾರ್, ಕಿಶನ್, ಪೃಥ್ವಿ ಹಾಗೂ ನೇರ ನಾಮಿನೇಟ್ ಆಗಿರುವ ಶೈನ್ ಶೆಟ್ಟಿ.
ಇದರಲ್ಲಿ ಇನ್ನಷ್ಟು ಓದಿ :