ಬಿಗ್ ಬಾಸ್ ಮನೆಯಿಂದ ಹೊರಹೋದ ಮೇಲೆ ಪ್ರಿಯಾಂಕ ಭವಿಷ್ಯವೇ ಬದಲಾಗುತ್ತದಂತೆ!

ಬೆಂಗಳೂರು| Krishnaveni K| Last Modified ಶುಕ್ರವಾರ, 25 ಅಕ್ಟೋಬರ್ 2019 (10:53 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಅಗ್ನಿಸಾಕ್ಷಿ ಖ್ಯಾತಿಯ ನಟಿ ಶೋ ಮುಗಿದ ಬಳಿಕ ಹೊರ ಹೋದ ಮೇಲೆ ಹೀರೋಯಿನ್ ಆಗಿ ಕ್ಲಿಕ್ ಆಗ್ತಾರಂತೆ.

 
ಪ್ರಿಯಾಂಕ ಇದುವರೆಗೆ ಧಾರವಾಹಿಯಲ್ಲಿ ವಿಲನ್ ಪಾತ್ರಧಾರಿಯಾಗಿ ಕ್ಲಿಕ್ ಆಗಿದ್ದರು. ಅದಾದ ಬಳಿಕ ಈಗ ಬಿಗ್ ಬಾಸ್ ಮನೆಯಲ್ಲೂ ಮಿಂಚುತ್ತಿದ್ದಾರೆ. ಈ ಶೋನಿಂದ ಹೊರಬಂದ ಮೇಲೆ ಪ್ರಿಯಾಂಕ ಹೀರೋಯಿನ್ ಆಗಿ ಮಿಂಚಲಿದ್ದಾರೆ ಎಂದು ಕುರಿ ಪ್ರತಾಪ್ ಭವಿಷ್ಯ ನುಡಿದಿದ್ದಾರೆ.
 
ಬಿಗ್ ಬಾಸ್ ಕುರಿ ಪ್ರತಾಪ್ ಗೆ ಭವಿಷ್ಯ ಹೇಳುವ ತಮಾಷೆಯ ಟಾಸ್ಕ್ ಕೊಟ್ಟಿದ್ದರು. ಆಗ ಪ್ರಿಯಾಂಕ ನೋಡಮ್ಮಾ ನೀನು ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ದೊಡ್ಡ ಹೀರೋಯಿನ್ ಆಗ್ತೀಯಾ ಎಂದಿದ್ದಾರೆ. ಇದಕ್ಕೆ ಸಹ ಸ್ಪರ್ಧಿಗಳು ಈಗಲೇ ಆಟೋಗ್ರಾಫ್ ಕೊಟ್ಟುಬಿಡಿ ಎಂದು ಕಿಚಾಯಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :