ಧಾರವಾಹಿಗಳ ಅವಧಿಗೆ ಕತ್ತರಿ: ಎಪಿಸೋಡ್ ಉಳಿಸಲು ಪರದಾಟ

ಬೆಂಗಳೂರು| Krishnaveni K| Last Modified ಮಂಗಳವಾರ, 24 ಮಾರ್ಚ್ 2020 (09:32 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಇದೇ ಮೊದಲ ಬಾರಿಗೆ ಧಾರವಾಹಿಗಳ ಶೂಟಿಂಗ್ ಸ್ಥಗಿತಗೊಂಡಿದೆ. ಹೀಗಾಗಿ ದಿನನಿತ್ಯ ಪ್ರಸಾರ ಮಾಡಲು ಎಪಿಸೋಡ್ ಉಳಿಸಿಕೊಳ್ಳುವ ಹರಸಾಹಸ ಮಾಡುತ್ತಿವೆ ಚಾನೆಲ್ ಗಳು.
 

ಜೀ ಕನ್ನಡ ವಾಹಿನಿಯ ಎಲ್ಲಾ ಧಾರವಾಹಿಗಳಲ್ಲಿ ಈಗ ಆರಂಭದ ಮೂರು ನಿಮಿಷ ಟೈಟಲ್ ಸಾಂಗ್ ಪ್ರಸಾರ ಮಾಡಲಾಗುತ್ತಿದೆ. ಜತೆಗೆ ದಿನದ ಎಪಿಸೋಡ್ ನ ಒಟ್ಟು ನಿಮಿಷಗಳನ್ನು ಕಡಿತಗೊಳಿಸಲಾಗಿದೆ.
 
ಇದಲ್ಲದೆ ಹೆಚ್ಚು ಫ್ಲ್ಯಾಶ್ ಬ್ಯಾಕ್ ಸೀನ್, ಮುಖದ ಭಾವನೆ ತೋರಿಸುವುದರಲ್ಲೇ ನಿಮಿಷ ಕಳೆಯುತ್ತಿದ್ದಾರೆ. ಈ ಮೂಲಕ ಎಷ್ಟು ಸಾಧ‍್ಯವೋ ಅಷ್ಟು ಬ್ಯಾಂಕಿಂಗ್ ಎಪಿಸೋಡ್ ಉಳಿಸಿ ಶೂಟಿಂಗ್ ಆರಂಭವಾಗುವವರೆಗೂ ಅಡ್ಜಸ್ಟ್ ಮೆಂಟ್ ಮಾಡಿಕೊಳ್ಳಲಾಗುತ್ತಿದೆ. ಇದು ಎಷ್ಟು ದಿನದವರೆಗೆ ಮುಂದುವರಿಯುತ್ತದೋ ಕಾದು ನೋಡಬೇಕು.
ಇದರಲ್ಲಿ ಇನ್ನಷ್ಟು ಓದಿ :