ಸಾಕಿದ ನಾಯಿಗಳಿಗಾಗಿ ಜೀವದ ಹಂಗನ್ನೇ ತೊರೆದ ಕೇರಳದ ಮಹಿಳೆ

ಕೇರಳ| pavithra| Last Modified ಭಾನುವಾರ, 19 ಆಗಸ್ಟ್ 2018 (07:16 IST)
: ಕೇರಳದ ಮಹಾಮಳೆಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ನೂರಾರು ಜನರು ಮೃತಪಟ್ಟಿದ್ದಾರೆ. ಬದುಕುಳಿದವರು ಜೀವ ಉಳಿದರೆ ಸಾಕಪ್ಪ ಎಂದು ಪರಾದುತ್ತಿರುವಾಗ ಕೇರಳದ ತ್ರಿಶೂರ್ ನ ಮಹಿಳೆಯೊಬ್ಬರು ತಾನು ಸಾಕಿದ ನಾಯಿಗಳಿಗಾಗಿ ಜೀವದ ಹಂಗನ್ನೇ ತೊರೆದಿದ್ದಾರೆ.

ಹೌದು ಕೇರಳದ ಮಹಾಮಳೆಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ನೂರಾರು ಜನರು ಮೃತಪಟ್ಟಿದ್ದಾರೆ. ಅಲ್ಲಿ ರಕ್ಷಣಾ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಈ ವೇಳೆ ಕೇರಳದ ತ್ರಿಶೂರ್ ನಲ್ಲಿ ಬರೋಬ್ಬರಿ 25 ಶ್ವಾನಗಳೊಂದಿಗೆ ವಾಸವಾಗಿದ್ದ ಸುನೀತಾ ಎಂಬ ಮಹಿಳೆ ತಾನು ಸಾಕಿರುವ ನಾಯಿಗಳನ್ನು ಬಿಟ್ಟು ಹೋಗಲಾರೆ ಎಂದು ಪಟ್ಟು ಹಿಡಿದಿದ್ದಾರೆ.


ಅವು ನನ್ನ ಜೀವಕ್ಕಿಂತಲೂ ಹೆಚ್ಚು, ನಾಯಿಗಳನ್ನು ಬಿಟ್ಟು ಯಾವುದೇ ಕಾರಣಕ್ಕೂ ತೆರಳುವುದಿಲ್ಲ ಎಂದು ಮಹಿಳೆ ಹಠ ಹಿಡಿದಿದ್ದಾರೆ. ಆದಕಾರಣ ರಕ್ಷಣಾ ಪಡೆ ಹೆಚ್ಚಿನ ಬೋಟ್ ತರೆಸಿಕೊಂಡು ಶ್ವಾನಗಳ ಜೊತೆ ಆ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :