ಏರ್ಟೆಲ್​ನಿಂದ ಇದೀಗ ಬಂಪರ್ ಆಫರ್!

ನವದೆಹಲಿ| Ramya kosira| Last Modified ಶುಕ್ರವಾರ, 26 ನವೆಂಬರ್ 2021 (16:01 IST)
ಏರ್ಟೆಲ್ ಇದೀಗ ಬಂಪರ್ ಆಫರ್ ಒಂದನ್ನು ಪರಿಚಿಯಿಸಿದೆ. ಮೊನ್ನೆಯಷ್ಟೆ ಏರ್ಟೆಲ್ ನವೆಂಬರ್ 26 ರಿಂದ ತನ್ನ ಪ್ರಿಪೇಯ್ಡ್ ಪ್ಲಾನ್ಗಳ ದರ ಹೆಚ್ಚಳ ಮಾಡುವುದಾಗಿ ಹೇಳಿತ್ತು.
ಅದರಂತೆ ಇಂದಿನಿಂದ ಹೊಸ ಬೆಲೆಗಳು ಅನ್ವಯ ಆಗಲಿವೆ. ಹೀಗಿರುವಾಗ ಏರ್ಟೆಲ್ನ ಪ್ರಿಪೇಯ್ಟ್ ಯೋಜನೆಗಳು ದರ ಏರಿಕೆ ಕಂಡ ಬೆನ್ನಲ್ಲೇ ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ.
ಹೌದು, ಏರ್ಟೆಲ್ ಪ್ರಿಪೇಯ್ಡ್ ಯೋಜನೆಗಳು ರೀಚಾರ್ಜ್ ಮಾಡುವ ಬಳಕೆದಾರರು ಪ್ರತಿದಿನ 500 MB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಬಹುದು. ಆದರೆ, ಕಂಪನಿ ಇದಕ್ಕೊಂದು ಟ್ವಿಸ್ಟ್ ನೀಡಿದೆ.
ಏರ್ಟೆಲ್ ತನ್ನ ನಾಲ್ಕು ಪ್ರಿಪೇಯ್ಡ್ ಯೋಜನೆಗಳ ಡೇಟಾ ಪ್ರಯೋಜನಗಳನ್ನು 500 MB ಉಚಿತ ಡೇಟಾದೊಂದಿಗೆ ನವೀಕರಿಸಿದೆ. ಅಂದರೆ, ಏರ್ಟೆಲ್ನ ರೂ. 719, ರೂ. 299, ರೂ. 265 ಮತ್ತು ರೂ. 839 ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡುವ ಬಳಕೆದಾರರು ಪ್ರತಿದಿನ 500 MB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಲು ಸಾಧ್ಯವಾಗುತ್ತದೆ.
ಆದರೆ, ಈ 500 MB ಡೇಟಾ ಆಫರ್ ಅನ್ನು ಗ್ರಾಹಕರು ರಿಡೀಮ್ ಮಾಡಿಕೊಳ್ಳಬೇಕಿದೆ. ಅಂದರೆ ಈ ನಾಲ್ಕು ಯೋಜನೆಗಳಲ್ಲಿ ಒಂದು ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡ ನಂತರ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಗ ಈ ಆ್ಯಪ್‌ನಲ್ಲಿ 500 MB ಉಚಿತ ಡೇಟಾವನ್ನು ರಿಡೀಮ್ ಮಾಡಿಕೊಳ್ಳುವ ಅಯ್ಕೆ ಕಾಣಿಸಲಿದೆ. ಈ ಮೂಲಕ ಉಚಿತವಾಗಿ 500 MB ಹೆಚ್ಚುವರಿ ದೈನಂದಿನ ಡೇಟಾವನ್ನು ಪಡೆಯಬಹುದಾಗಿದೆ.


ಇದರಲ್ಲಿ ಇನ್ನಷ್ಟು ಓದಿ :