ಮಾಯಾವತಿ ಕೈ ಕೊಟ್ಟ ಮೇಲೆ ಹೊಸ ಗೆಳೆಯನ ಮೇಲೆ ಕಾಂಗ್ರೆಸ್ ಕಣ್ಣು

ನವದೆಹಲಿ| Krishnaveni K| Last Modified ಶುಕ್ರವಾರ, 5 ಅಕ್ಟೋಬರ್ 2018 (08:33 IST)
ನವದೆಹಲಿ: ಮಹಾಘಟಬಂಧನ ಮಾಡಲು ಹೊರಟ ಕಾಂಗ್ರೆಸ್ ಗೆ ಮಾಯಾವತಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಹೊಸ ಸಖ್ಯ ಮಾಡಲು ಹೊರಟಿದೆ.


ಉತ್ತರ ಪ್ರದೇಶದಲ್ಲಿ ಮಾಯಾವತಿಯಲ್ಲಿ ಕಳೆದುಕೊಂಡ ಗೆಳೆತನವನ್ನು ಇದೀಗ ಸಮಾಜವಾದಿ ಪಕ್ಷದ ಜತೆಗೆ ಕಂಡುಕೊಳ್ಳಲು ಮುಂದಾಗಿದೆ. ಹಿಂದೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜತೆಗೆ ಗೆಳೆತನ ಮಾಡಿ ಕಾಂಗ್ರೆಸ್ ಕೈ ಸುಟ್ಟುಕೊಂಡಿತ್ತು.


ಇದಾದ ಬಳಿಕ ಎರಡೂ ಪಕ್ಷಗಳೂ ಬೇರ್ಪಟ್ಟಿದ್ದವು. ಇದೀಗ ಮತ್ತೆ ಲೋಕಸಭೆ ಚುನಾವಣೆಗೆ ಬಿಜೆಪಿ ಸೋಲಿಸಲು ಕಾಂಗ್ರೆಸ್ ಜತೆ ಸೇರಲು ಸಿದ್ಧ ಎಂದು ಅಖಿಲೇಶ್ ಯಾದವ್ ಬಹಿರಂಗವಾಗಿ ಹೇಳಿರುವುದರಿಂದ ಕಾಂಗ್ರೆಸ್ ಗೂ ಮತ್ತೆ ಎಸ್ ಪಿ ಜತೆ ಸಖ್ಯ ಬೆಳೆಸುವ ಉತ್ಸಾಹ ಬಂದಿದೆ. ಉತ್ತರ ಪ್ರದೇಶದಲ್ಲಿ ಪ್ರಮುಖ ಪಕ್ಷವೊಂದರ ಬಲ ಕಾಂಗ್ರೆಸ್ ಗೆ ಬೇಕಾಗಿದೆ. ಅದನ್ನೀಗ ಎಸ್ ಪಿ ಮೂಲಕ ಕಂಡುಕೊಳ್ಳಲು ಮುಂದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :