ಪ್ರವಾಹದ ಜತೆಗೆ ಕೊಡಗಿನ ಜನತೆಗೆ ಶಾಕ್ ಕೊಟ್ಟ ಸುಳ್ಳು ಸುದ್ದಿ!

ಮಡಿಕೇರಿ| Krishnaveni K| Last Modified ಭಾನುವಾರ, 19 ಆಗಸ್ಟ್ 2018 (09:08 IST)
ಮಡಿಕೇರಿ: ಮಹಾ ಮಳೆಯಿಂದಾಗಿ ಪ್ರವಾಹಕ್ಕೆ ತಮ್ಮ ಮನೆ ಮಠ ಕಳೆದುಕೊಂಡಿರುವ ಕೊಡಗು ಜನತೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯೊಂದು ಶಾಕ್ ಕೊಟ್ಟಿತು.

ಪ್ರವಾಹದಿಂದ ಜೀವ ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ಮಧ್ಯೆಯೇ ಕೊಡಗಿನಲ್ಲಿ ಭೂಕಂಪವಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಮತ್ತಷ್ಟು ಆತಂಕ ಸೃಷ್ಟಿಸಿತು.


ಆದರೆ ಇದೆಲ್ಲಾ ವದಂತಿ. ಭೂ ವಿಜ್ಞಾನ ಇಲಾಖೆ ಯಾವುದೇ ಮುನ್ಸೂಚನೆ ನೀಡಿಲ್ಲ. ಇಂತಹ ವದಂತಿಗಳಿಗೆಲ್ಲಾ ಕಿವಿಗೊಡಬೇಡಿ ಎಂದು ಸಿಎಂ ಕುಮಾರಸ್ವಾಮಿ ಜನತೆಗೆ ಮನವಿ ಮಾಡಿದ್ದಾರೆ. ಇಂತಹ ಪ್ರವಾಹ ಪರಿಸ್ಥಿತಿಯಲ್ಲೂ ಇಂತಹ ತಲೆಬುಡವಿಲ್ಲದ ಸುದ್ದಿ ಹಬ್ಬಿಸಿ ಜನರನ್ನು ಆತಂಕಕ್ಕೆ ದೂಡುತ್ತಿರುವುದು ವಿಪರ್ಯಾಸವೇ ಸರಿ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :