ರುಚಿಕರ ಫೇಡೇ ಮನೆಯಲ್ಲೇ ಮಾಡಿ

ಬೆಂಗಳೂರು| Jagadeesh| Last Modified ಗುರುವಾರ, 18 ಜೂನ್ 2020 (17:30 IST)
ರುಚಿಕರವಾದ ಫೇಡೆಯನ್ನು ಬೇಕಾದಾಗ ಮನೆಯಲ್ಲಿ ಮಾಡಿ ರುಚಿ ಸವಿಯಬಹುದು.

ಏನೇನು ಬೇಕು?

ಹಾಲು 1 ಲೀಟರ್
ಸಕ್ಕರೆ 150 ಗ್ರಾಂ
ಪಿಸ್ತಾ 50 ಗ್ರಾಂ
ಏಲಕ್ಕಿ ಪುಡಿ ಕಾಲು ಚಮಚ
ಕೇಸರಿ ಬಣ್ಣ 1 ಚಿಟಿಕೆ

ಮಾಡೋದು ಹೇಗೆ?

ಸಕ್ಕರೆ ಏಲಕ್ಕಿ ಪುಡಿಯನ್ನು ಬೆರೆಸಿ ಇಡಿ. ನೀರಿನ ಅಂಶ ಇಂಗಿ ಹಾಲು ಗಟ್ಟಿಯಾಗುವವರೆಗೂ ಕುದಿಸಿ ಸಕ್ಕರೆ ಸೇರಿಸಿ. ಇನ್ನಷ್ಟು ಇಂಗಿಸಿ. ಖೋವಾದ ಮೇಲೆ ಬಿಳಿ ಬಟ್ಟೆ ಮುಚ್ಚಿ ಆರಲು ಬಿಡಿ. ಆರಿದ ಖೋವಾಕ್ಕೆ ಏಲಕ್ಕಿ, ಪಿಸ್ತಾ ಮತ್ತು ಕೇಸರಿ ಬಣ್ಣ ಹಾಕಿ ಕಲಿಸಿ ಸಣ್ಣ ಉಂಡೆ ಮಾಡಿ.

ಇದರಲ್ಲಿ ಇನ್ನಷ್ಟು ಓದಿ :