ಈರುಳ್ಳಿ - ಬೆಳ್ಳುಳ್ಳಿ ಸಂಡಿಗೆ ಮಾಡಿ ನೋಡಿ

ಬೆಂಗಳೂರು| Jagadeesh| Last Modified ಶುಕ್ರವಾರ, 19 ಜೂನ್ 2020 (17:48 IST)
ನಿಮಗೆ ಈರುಳ್ಳಿ-ಬೆಳ್ಳುಳ್ಳಿ ತುಂಬಾನೇ ಇಷ್ಟ ಅನ್ನೋದಾದರೆ ಅದರ ಸಂಡಿಗೆ ಮಾಡಿ ರುಚಿ ನೋಡಿ.

ಏನೇನು ಬೇಕು?

ಮೈದಾ ಹಿಟ್ಟು ಕಾಲು ಕೆಜಿ
ಈರುಳ್ಳಿ ಕಾಲು ಕೆಜಿ
ಬೆಳ್ಳುಳ್ಳಿ 50 ಗ್ರಾಂ
ಉಪ್ಪು

ಮಾಡೋದು ಹೇಗೆ?

ಮೈದಾಹಿಟ್ಟನ್ನು ಜರಡಿ ಹಿಡಿದು ಒಂದು ತಟ್ಟೆಗೆ ಹಾಕಿ. ಒಲೆಯ ಮೇಲೆ ಒಂದು ಪಾತ್ರೆ ಇಟ್ಟು ನೀರು ಹಾಕಿಡಿ. ನೀರು ಕುದಿಯುವಾಗ ಮೈದಾ ಹಿಟ್ಟು ಹಾಕಿ ಕದಡಿ. ಮೈದಾ ಹಿಟ್ಟು ಅರ್ಧ ಬೆಂದಾಗ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಉಪ್ಪು, ಹಾಕಿ ಕಲಸಿರಿ, ಎಲ್ಲವೂ ಬೆಂದ ಮೇಲೆ ಕೆಳಗೆ ಇಳಿಸಿ, ಹಿಟ್ಟು ಆರಿದ ಮೇಲೆ ಸಂಡಿಗೆ ಇಡಿ.

 
ಇದರಲ್ಲಿ ಇನ್ನಷ್ಟು ಓದಿ :