ಸ್ಲಿಮ್ , ಸುಂದರವಾಗಿ ಕಾಣಿಸಿಕೊಳ್ಳಲು ಸರಳ ಉಪಾಯ

ನೀವು ಸೇವಿಸುವಷ್ಟೇ ಆಹಾರವನ್ನು ಸೇವಿಸಿ, ಸ್ವಲ್ಪವೂ ಆಹಾರವನ್ನು ಕಡಿಮೆ ಮಾಡದೆ ನಿಮ್ಮ ದೇಹದ ತೂಕ ಕಡಿಮೆಯಾದರೆ ಹೇಗಿರುತ್ತದೆ? ಆದರೆ ಇದು ಸಾಧ್ಯವೇ ಎಂಬ ಪ್ರಶ್ನೆಯೇ? ಖಂಡಿತ ಸಾಧ್ಯ. ಬೆಳಗ್ಗಿನ ಉಪಾಹಾರವನ್ನು ಒಂದೇ ಬಾರಿ ಸೇವಿಸುವ ಬದಲಿಗೆ ಮೂರು - ನಾಲ್ಕು ಬಾರಿ ಸೇವಿಸಿದರೆ ಮೂವತ್ತು ಶೇಕಡಾ ಕ್ಯಾಲರಿಗಳು ಕಡಿಮೆ ಯಾಗುತ್ತವೆ ಎಂದು ಸಂಶೋಧನೆ ಹೇಳಿರುವ ಸತ್ಯ.

photo credit social media

ನಿಗದಿತ ಮಧ್ಯಂತರಗಳಲ್ಲಿ ಆಹಾರ ಸೇವಿಸಿದಾಗ ನಮ್ಮ ದೇಹದಲ್ಲಿ ಇನ್ಸುಲಿನ್ ಕಡಿಮೆ ಪ್ರಮಾಣದಲ್ಲಿ ಸ್ರವಿಸುತ್ತದೆ ಇದರಿಂದಾಗಿ ಹಸಿವು ಆಗುವ ಪ್ರಮಾಣ ಬಹುತೇಕ ಕಡಿಮೆ ಆಗುತ್ತದೆ. ಹಾಗೂ ಕಡಿಮೆ ಆಹಾರ ಸೇವನೆಯಾಗುತ್ತದೆ. ಹಾಗಾಗಿ ದಿನಕ್ಕೆ ಮೂರರ ಬದಲಿಗೆ ಐದು ಅಥವಾ ಆರು ಬಾರಿ ಆಹಾರ ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ತೂಕ ಕಡಿಮೆ ಮಾಡಲು ಒಂದು ಯೋಜನೆಯನ್ನು ಹಾಕಿಕೊಳ್ಳುವುದು ಬಹಳ ಉತ್ತಮ. ಆದರೆ ನೀವು ಹಾಕಿದ ಯೋಜನೆ ಸತ್ಯಕ್ಕೆ ಸಮೀಪವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಒಂದೇ ತಿಂಗಳಲ್ಲಿ 5 ಕೆ.ಜಿ ಕಡಿಮೆಯಾಗಬೇಕು ಎಂದು ಪ್ರಯತ್ನಿಸಲು ಹೊರಡಿ ಬೇರೇನಾದರೂ ಸಮಸ್ಯೆಗಳನ್ನು ತಂದುಕೊಳ್ಳುವ ಬದಲು ಪ್ರತಿ ತಿಂಗಳು ಸ್ವಲ್ಪ ಸ್ವಲ್ಪವೇ ತೂಕ ಕಡಿಮೆ ಮಾಡಿದರೆ ಒಳ್ಳೆಯದಲ್ಲವೇ?

ಭೋಜನದ ನಂತರ ಆಹಾರ ಸೇವನೆಯೇ ಹೆಚ್ಚಿನ ಜನರಲ್ಲಿ ತೂಕ ಹೆಚ್ಚು ಮಾಡುವ ಶತ್ರುವಾಗಿದೆ. ಒಮ್ಮೆ ಆಹಾರ ಸೇವಿಸಿದ ಮೇಲೆ ಜೀರ್ಣವಾಗಲು ಸಮಯ ಕೊಡಿ. ನಿಮಗೆ ನಿಮ್ಮ ಆಸೆಯನ್ನು ಹತ್ತಿಕ್ಕಲು ಆಗುತ್ತಿಲ್ಲ ಎಂದಾದರೆ ಆಹಾರ ಸೇವಿಸಿದ ಕೂಡಲೆ ಬ್ರಷ್ ಮಾಡಿ ಇದು ತಿನ್ನುವ ಆಸೆಯನ್ನು ಕಡಿಮೆ ಮಾಡುತ್ತದೆ. ಅಥವಾ ತಿಂಡಿ ಪೊಟ್ಟಣಗಳನ್ನು ಅಡಗಿಸಿಡಿ.

ಖರೀದಿಗೆ ಹೋದಾಗ ಅಥವಾ ಮಾಲ್ ಗೆ ಶಾಪಿಂಗ್ ಗೆ ಹೋದಾಗ ಖಾಲಿ ಹೊಟ್ಟೆ ಇಟ್ಟುಕೊಂಡು ಎಂದೂ ಹೋಗಬೇಡಿ. ಇದು ನೋಡಿದ್ದನ್ನೆಲ್ಲವನ್ನೂ ತೆಗೆದುಕೊಳ್ಳುವ ಹಾಗೂ ಅಲ್ಲೇ ಸೇವಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ

ತೂಕ ಕಡಿಮೆ ಮಾಡಬೇಕು ಎಂದು ಅನ್ನಿಸಿದ ದಿನದಿಂದ ನಾಲ್ಕು ದಿನಗಳ ವರೆಗೆ ಇರುವ ಉತ್ಸಾಹ ಮತ್ತೆ ಇರುವುದಿಲ್ಲ. ಇದಕ್ಕೆ ಕಾರಣ ಅದೇ ವ್ಯಾಯಾಮಗಳನ್ನು ಮಾಡಿ ಬೇಸರ ಬಂದಿರುತ್ತದೆ. ಇದಕ್ಕಾಗಿ ಕೆಲವು ಸರಳ ಮಾರ್ಗಗಳನ್ನು ಬಳಸಿ ಉದಾಹರಣೆಗೆ ನಿಮಗೆ ವಾಕಿಂಗ್ ಇಷ್ಟ ಎಂದಾದರೆ ಪ್ರತಿದಿನ ಒಂದೇ ದಾರಿಯಲ್ಲಿ ನಡೆಯಬೇಡಿ.

ಅಸಮರ್ಪಕ ನಿದ್ದೆ ಹೆಚ್ಚು ಆಹಾರ ಸೇವಿಸುವಂತೆ ಮಾಡುತ್ತದೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ಹೆಚ್ಚಿನ ಆಹಾರ ಸೇವನೆಯಿಂದ ಏನಾಗುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ನಿದ್ದೆಯನ್ನು ಸರಿಯಾಗಿ ಮಾಡಿ.

ನಿದ್ದೆಯ ಅವಧಿಯನ್ನು ನಿಗದಿ ಪಡಿಸಿ ಅದೇ ಅವಧಿಯಲ್ಲಿ ಮಲಗುವಂತೆ ನೋಡಿಕೊಳ್ಳಿ. ಇದು ನಿಮ್ಮ ಉತ್ಸಾಹದ ಮೇಲೂ ಪ್ರಭಾವ ಬೀರುತ್ತದೆ. ಹೆಚ್ಚು ಉತ್ಸಾಹಿತರಾಗಿದ್ದಲ್ಲಿ ಹೆಚ್ಚು ಕೆಲಸ ಇದೂ ತೂಕ ಕಡಿಮೆ ಮಾಡುವ ಮಾರ್ಗವಾಗಿದೆ.