ಮಧ್ಯಪಾನ ಪುರುಷರಿಗೂ ಮಹಿಳೆಯರಿಗೂ ಹಾನಿಕಾರಕ

ದೇಹದಲ್ಲಿ ಫ್ಯಾಟ್‌: ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ತೂಕ ಕಡಿಮೆ. ಪುರುಷನಿಗೆ ಸರಿಸಮಾನ ತೂಕ ಹೊಂದಿರುವ ಮಹಿಳೆಯೊಬ್ಬಳ ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಫ್ಯಾಟಿ ಟಿಶ್ಶೂಗಳಿರುತ್ತವೆ. ಅಂದರೆ ನೀರು ಮದ್ಯದ ಘನತ್ವವನ್ನು ಕುಗ್ಗಿಸುತ್ತದೆ. ಹೀಗಾಗಿ ಮಹಿಳೆಯರ ದೇಹದಲ್ಲಿ ಮದ್ಯದ ಘನತ್ವ ಹೆಚ್ಚು ಹೊತ್ತಿನ ತನಕ ಹಾಗೆಯೇ ಉಳಿದಿರುತ್ತದೆ.

photo credit social media

ಮಹಿಳೆಯರಲ್ಲಿ ಕಿಣ್ವಗಳ (ಎಂಜೈಮ್ಸ್) ಸಂಖ್ಯೆ ಕಡಿಮೆ ಇರುತ್ತದೆ. ಅದು ಪ್ಯಾಂಕ್ರಿಯಾಸ್‌ ಮತ್ತು ಜಠರದಲ್ಲಿ ಚಯಾಪಚಯ ಪ್ರಕ್ರಿಯೆಗೊಳಪಡಬೇಕು. ಇದರ ಪರಿಣಾಮವೆಂಬಂತೆ ಮಹಿಳೆಯರ ರಕ್ತದಲ್ಲಿ ಮದ್ಯದ ಪ್ರಮಾಣ ಜಾಸ್ತಿಯಾಗುತ್ತದೆ.

ಮದ್ಯ ಸೇವನೆಯಿಂದ ಕೇವಲ ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಅದು ಆ ವ್ಯಕ್ತಿಯ ಖಾಸಗಿ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಯಾರು ಅಧಿಕ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿರುತ್ತಾರೊ, ಅವರಲ್ಲಿ ಕರುಳಿಗೆ ಊತ ಮತ್ತು ಲಿವರ್‌ ಸಿರೋಸಿಸ್‌ ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಒಂದು ವೇಳೆ ಅದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದೇ ಇದ್ದರೆ ಲಿವರ್‌ ಸಂಪೂರ್ಣವಾಗಿ ಹಾಳಾಗುತ್ತದೆ. ಅದು ಅವರ ಜೀವಿತಕ್ಕೆ ಕುತ್ತನ್ನುಂಟು ಮಾಡಬಹುದು.

ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವುದರಿಂದ ವಿಟಮಿನ್‌ ಬಿ12ನ ಪ್ರಮಾಣ ಕಡಿಮೆಯಾಗುತ್ತದೆ. ಆ ಕಾರಣದಿಂದ ತೀವ್ರ ದಣಿವಾಗುತ್ತದೆ. ತಲೆ ಸುತ್ತಿದಂತಾಗುವ ಸಮಸ್ಯೆ ಕೂಡ ಕಂಡುಬರುತ್ತದೆ.

ಮದ್ಯ ದೇಹದಲ್ಲಿನ ಲೆಪ್ಟಿನ್‌ನ ಮಟ್ಟವನ್ನು ಕಡಿಮೆಗೊಳಿಸುತ್ತದೆ. `ಲೆಪ್ಟಿನ್‌’ ಇದು ಹಸಿವನ್ನು ನಿಯಂತ್ರಣದಲ್ಲಿಡುವ ಹಾರ್ಮೋನಾಗಿದೆ. ಅದರ ಪ್ರಮಾಣ ಕಡಿಮೆಯಾಗುವುದರಿಂದ ವಿಪರೀತ ಹಸಿವಾಗುತ್ತದೆ. ಅದರಿಂದಾಗಿ ಕ್ಯಾಲೋರಿ ಇನ್‌ಟೇಕ್‌ಅಧಿಕವಾಗಿರುವ ಆಹಾರ ಪದಾರ್ಥಗಳನ್ನು ತಿನ್ನಬೇಕೆಂಬ ತುಡಿತ ಹೆಚ್ಚುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವ ಅಪಾಯ ಇನ್ನೂ ಹೆಚ್ಚುತ್ತದೆ.

ಮದ್ಯ ಸೇವನೆಯಿಂದ ಅವಧಿಗೆ ಮುನ್ನ ಮೆನೋಪಾಸ್‌, ಬಂಜೆತನ ಹಾಗೂ ಗರ್ಭಪಾತದ ಅಪಾಯ ಹೆಚ್ಚುತ್ತದೆ. ಯಾವ ಮಹಿಳೆಯರು ನಿಯಮಿತವಾಗಿ ಮದ್ಯ ಸೇವಿಸುತ್ತಿರುತ್ತಾರೊ, ಅವರ ಮುಟ್ಟಿನಲ್ಲೂ ಏರುಪೇರಾಗುತ್ತದೆ.

ಮದ್ಯ ಸೇವನೆಯಿಂದಾಗಿ ನಿದ್ರಾಹೀನತೆಯ ಸಮಸ್ಯೆ ಹೆಚ್ಚುತ್ತದೆ. ನಿರಂತರ ಒತ್ತಡದ ಸ್ಥಿತಿ ಖಿನ್ನತೆಯಲ್ಲಿ ಬದಲಾಗುತ್ತದೆ. ಒಂದು ವೇಳೆ ಖಿನ್ನತೆ ಸ್ಥಿತಿಯಿಂದ ಹೊರಬರಲು ಪ್ರಯತ್ನ ಮಾಡದೇ ಇದ್ದರೆ, ಮದ್ಯ ಸೇವನೆಯನ್ನು ಹಾಗೆಯೇ ಮುಂದುವರಿಸಿದಲ್ಲಿ ವ್ಯಕ್ತಿ ಗಾಢ ಖಿನ್ನತೆಗೆ ಈಡಾಗಿ ಅದು ಒಮ್ಮೊಮ್ಮೆ ಆತ್ಮಹತ್ಯೆಗೂ ಪ್ರಮುಖ ಕಾರಣವಾಗುತ್ತದೆ.