ರುಚಿಕರವಾದ ಬೂದು ಕುಂಬಳಕಾಯಿ ದೋಸೆ ರೆಸಿಪಿ

ಬೂದು ಕುಂಬಳ ಕಾಯಿಯಿಂದ ಹುಳಿ, ಪಲ್ಯ, ಹಲ್ವಾ ಮಾಡುವುದನ್ನು ನೋಡಿರುತ್ತೀರಿ. ಆದರೆ ಬೂದು ಕುಂಬಳಕಾಯಿಯನ್ನು ಬಳಸಿ ರುಚಿಕರವಾದ ದೋಸೆಯನ್ನು ತಯಾರಿಸಬಹುದು. ಇದು ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಉತ್ತಮವಾಗಿದೆ.

Photo Credit: Social Media

ಮೊದಲು ಎರಡು ಲೋಟದಷ್ಟು ದೋಸೆ ಅಕ್ಕಿನ್ನು 4-5 ಗಂಟೆ ನೆನೆ ಹಾಕಿಡಿ

ಬೂದು ಕುಂಬಳಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ

ಎರಡು ಲೋಟ ಅಕ್ಕಿಗೆ ಒಂದು ಲೋಟದಷ್ಟು ಬೂದು ಕುಂಬಳಕಾಯಿಯ ಹೋಳುಗಳಿದ್ದರೆ ಸಾಕು

ಅಕ್ಕಿ ನೆನೆದ ನಂತರ ಮೊದಲು ಅಕ್ಕಿಯನ್ನು ಸ್ವಲ್ಪ ಉಪ್ಪು ಹಾಕಿ ನುಣ್ಣಗೆ ರುಬ್ಬಿ

ಬಳಿಕ ಕತ್ತರಿಸಿದ ಬೂದು ಕುಂಬಳಕಾಯಿ ಹೋಳುಗಳನ್ನು ಪ್ರತ್ಯೇಕವಾಗಿ ನುಣ್ಣಗೆ ರುಬ್ಬಿ.

ಬಳಿಕ ಅಕ್ಕಿ ಹಿಟ್ಟಿನ ಜೊತೆ ಕುಂಬಳಕಾಯಿ ಪೇಸ್ಟ್ ನ್ನೂಸೇರಿಸಿ ನೀರು ದೋಸೆಗಿಂತ ಕೊಂಚ ದಪ್ಪಗೆ ಹದ ಮಾಡಿ

ಇದನ್ನು ಕಾದ ಕಾವಲಿಗೆಗೆ ಎಣ್ಣೆ ಹಾಕಿ ಹುಯ್ದರೆ ರುಚಿಯಾದ ಬೂದು ಕುಂಬಳಕಾಯಿ ದೋಸೆ ಸವಿಯಬಹುದು