ಸರ್ವರೋಗಕ್ಕೆ ಮನೆಮದ್ದು ಅಶ್ವಗಂಧ

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಲು ಅದ್ಭುತ ಗಿಡಮೂಲಿಕೆ ಎಂದರೇ ಅದು ಅಶ್ವಗಂಧ. ಇದು ಆರೋಗ್ಯವನ್ನು ವೃದ್ಧಿಸುವ ಗುಣವನ್ನು ಹೊಂದಿದೆ. ಅಶ್ವಗಂಧವನ್ನು ಅಲ್ಪಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸುವುದರಿಂದ ದೇಹದ ವಿವಿಧ ಕ್ರಿಯೆಗಳು ಯಾವುದೇ ತೊಂದರೆ ಇಲ್ಲದೆ ನಡೆಯುತ್ತದೆ. ಅಲ್ಲದೇ ಮನುಷ್ಯನಿಗೆ ಉತ್ತಮ ಆರೋಗ್ಯಕ್ಕೂ ಹೆಚ್ಚು ಸಹಾಯಕವಾಗಿದೆ.

photo credit social media

ಪ್ರಕೃತಿಯಲ್ಲಿ ನಮಗೆ ಸಿಗುವ ಗಿಡಮೂಲಿಕೆಗಳು ಹಲವಾರು ಪ್ರಯೋಜನಕಾರಿ ಗುಣಗಳನ್ನ ಹೊಂದಿರುತ್ತದೆ. ಮೂಲಿಕೆಯನ್ನು ಪರಿಗಣಿಸುವುದಾದರೆ ಅಶ್ವಗಂಧ ಹಲವು ತೊಂದರೆಗಳಿಗೆ ಉತ್ತರವಾಗಿದೆ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ತೊಂದರೆಗಳಿಗೂ ಇದು ಸಹಾಯಕವಾಗಿದೆ.

ಅಶ್ವಗಂಧವೂ ಕೇವಲ ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ಅಲ್ಲದೇ ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು, ಖಿನ್ನತೆಯನ್ನು ಕಡಿಮೆ ಮಾಡುವುದು ಸೇರಿದಂತೆ ಹತ್ತು ಹಲವಾರು ತೊಂದರೆಗಳಿಗೆ ಅಶ್ವಗಂಧ ಅದ್ಭುತ ಪ್ರಯೋಜನಗಳನ್ನ ಹೊಂದಿದೆ. ಈ ಪ್ರಯೋಜನಗಳು ಏನು ಎಂಬುದನ್ನ ನೀವೇ ನೋಡಿ.

ಅಶ್ವಗಂಧವೂ ಅದ್ಬುತವಾದ ರೋಗ ನಿರೋಧಕ ಶಕ್ತಿಯನ್ನ ಹೊಂದಿದೆ. ಇದರಲ್ಲಿರುವ ಔಷಧ ಗುಣದಿಂದ ಈ ಅಶ್ವಗಂಧವನ್ನು ಹಲವು ರೋಗಗಳ ಪರಿಹಾರಕ್ಕೆ ಬಳಸಲಾಗುತ್ತದೆ. ಅಶ್ವಗಂಧ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಬಲಿಷ್ಟವಾದಷ್ಟೂ ಹಲವಾರು ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುತ್ತದೆ.

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಗಳಲ್ಲಿ ಅಶ್ವಗಂಧವನ್ನು ಪ್ರಮುಖವಾಗಿ ಬಳಸಕಾಗುತ್ತದೆ. ಇನ್ನೂ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆ ಪ್ರಾರಂಭವಾಗಿದ್ದರೆ ಸಕಾಲದಲ್ಲಿ ಅಶ್ವಗಂಧ ಸೇವಿಸಿದರೆ ಈ ಜೀವಕೋಶಗಳು ಕೊಲ್ಲಲ್ಪಡಲು ಸಹಾಯಕವಾಗುತ್ತದೆ.

ದಿನನಿತ್ಯದ ಒತ್ತಡ ಕೆಲಸಗಳನ್ನ ಬಗ್ಗೆ ನಮ್ಮ ಆರೋಗ್ಯವನ್ನ ನಾವೇ ಕಾಪಾಡಿಕೊಳ್ಳಲು ನಾವು ಕಷ್ಟ ಪಡುತ್ತಿರುತ್ತೇವೆ. ಅಶ್ವಗಂಧವು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಯು ಸೂಚಿಸುತ್ತದೆ, ಇದು ಒತ್ತಡ ಮತ್ತು ಅದರ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಅಶ್ವಗಂಧವು ಶಾಂತ ಮತ್ತು ವಿಶ್ರಾಂತಿಯ ಭಾವನೆಗಳನ್ನು ಉತ್ತೇಜಿಸುತ್ತದೆ. ಒತ್ತಡದ ಮಟ್ಟಗಳು ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಅಶ್ವಗಂಧ ಹೆಚ್ಚು ಪರಿಣಾಮಕಾರಿಯಾಗಿದೆ.

ಇನ್ನೂ ಮಹಿಳೆಯರು ಕೂದಲು ಮತ್ತು ಚರ್ಮದ ಸಮಸ್ಯೆಯನ್ನು ಎದುರಿಸುತ್ತಿರುವವರು ಅಶ್ವಗಂಧವನ್ನು ಸೇವಿಸಿದರೆ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಪಡೆದುಕೊಳ್ಳಬಹುದು.