ಕ್ಯಾನ್ಸರ್ ಬರದಂತೆ ತಡೆಯಲು ಟಿಪ್ಸ್

ಕ್ಯಾನ್ಸರ್ ಎಂಬುದು ಮಾರಣಾಂತಿಕ ರೋಗವಾಗಿದ್ದು, ಇದನ್ನು ಬಾರದಂತೆ ತಡೆಯಲು ನಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕ್ಯಾನ್ಸರ್ ರೋಗ ಬಾರದಂತೆ ತಡೆಯಲು ಇಲ್ಲಿದೆ ಟಿಪ್ಸ್.

credit: social media

ಕ್ಯಾನ್ಸರ್ ಬಾರದಂತೆ ತಡೆಯಲು ಆಂಟಿ ಆಕ್ಸಿಡೆಂಟ್ ಅಂಶವಿರುವ ತರಕಾರಿ, ಹಣ್ಣುಗಳನ್ನು ಸೇವಿಸಿ

ಸಂಸ್ಕರಿತ ಆಹಾರ, ಕೆಂಪು ಮಾಂಸ ಮುಂತಾದ ಆಹಾರ ವಸ್ತುಗಳನ್ನು ಸೇವಿಸಬೇಡಿ

ಸಂಸ್ಕರಿತ ಸಕ್ಕರೆ, ಸಿಹಿ ಅಂಶವಿರುವ ಮತ್ತು ಕೃತಕ ಬಣ್ಣಗಳಿರುವ ಆಹಾರ ವಸ್ತುಗಳನ್ನು ಸೇವಿಸಬೇಡಿ.

ದೇಹ ತೂಕ ನಿಯಂತ್ರಣದಲ್ಲಿರಿಸಿಕೊಂಡರೆ ಕ್ಯಾನ್ಸರ್ ಮಾತ್ರವಲ್ಲ, ಅನೇಕ ರೋಗಗಳನ್ನು ತಡೆಗಟ್ಟಬಹುದು

ದೈಹಿಕ ಚಟುವಟಿಕೆ, ವರ್ಕೌಟ್ ಮಾಡುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಕ್ಯಾನ್ಸರ್ ತಡೆಗಟ್ಟಬಹುದು

ಮದ್ಯಪಾನ, ಧೂಮಪಾನದಂತಹ ಅನಾರೋಗ್ಯಕರ ಅಭ್ಯಾಸಗಳನ್ನು ಬಿಡಿ

ಆದಷ್ಟು ಸೂರ್ಯನ ವಿಕಿರಣಗಳಿಗೆ ದೇಹವೊಡ್ಡುವುದನ್ನು ತಪ್ಪಿಸಿಕೊಂಡರೆ ಉತ್ತಮ