ರಕ್ತದೊತ್ತಡ ನಿಯಂತ್ರಿಸುವ ಆಯುರ್ವೇದಿಕ್ ಪಾನೀಯಗಳು

ರಕ್ತದೊತ್ತಡ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಮಧ್ಯವಯಸ್ಸು ಆರಂಭವಾಗುತ್ತಲೇ ಬರುತ್ತಿರುವ ಸಾಮಾನ್ಯ ಖಾಯಿಲೆಯಾಗಿಬಿಟ್ಟಿದೆ. ರಕ್ತದೊತ್ತಡ ನಿಭಾಯಿಸಲು ಕೆಲವು ಆಯುರ್ವೇದಿಕ್ ಪಾನೀಯಗಳು ಇಲ್ಲಿವೆ ನೋಡಿ.

credit: social media

ನವಿಲುಕೋಸನ್ನು ಕತ್ತರಿಸಿಕೊಂಡು ರುಬ್ಬಿಕೊಂಡು ಅದರ ರಸವನ್ನು ಸೇವಿಸುತ್ತಾ ಬನ್ನಿ

ವಿಟಮಿನ್ ಸಿ, ಪೊಟಾಶಿಯಂ ಅಧಿಕವಾಗಿರುವ ಟೊಮೆಟೋವನ್ನು ಜ್ಯೂಸ್ ಮಾಡಿಕೊಂಡು ಸೇವಿಸಿ

ನೈಟ್ರೇಟ್ ಪ್ರಮಾಣ ಹೆಚ್ಚಿರುವ ಬೀಟ್ ರೂಟ್ ನ್ನು ಪ್ರತಿನಿತ್ಯ ಜ್ಯೂಸ್ ಮಾಡಿಕೊಂಡು ಕುಡಿಯಿರಿ

ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿರುವ ದಾಳಿಂಬೆ ಜ್ಯೂಸ್ ಮಾಡಿಕೊಂಡು ಸೇವಿಸಿದರೆ ಉತ್ತಮ

ದಾಸವಾಳವನ್ನು ಒಣಗಿಸಿ ಅದನ್ನು ಚಹಾ ಮಾಡಿಕೊಂಡು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ

ಖಾಲಿ ಹೊಟ್ಟೆಯಲ್ಲಿ ಕೆನೆ ರಹಿತ, ಕೊಬ್ಬು ರಹಿತ ಹಾಲನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣವಾಗುತ್ತದೆ

ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ.