ತೂಕ ಇಳಿಸಲು ಆಯುರ್ವೇದಿಕ ಪರಿಹಾರ

ತೂಕ ಇಳಿಸಲು ಏನೇನೋ ಕಸರತ್ತು ಮಾಡುವ ಬದಲು ಆಯುರ್ವೇದದ ಪ್ರಕಾರ ಸುಲಭವಾಗಿ ಮನೆಯಲ್ಲಿಯೇ ಮದ್ದು ಮಾಡಬಹುದು. ತೂಕ ಇಳಿಕೆಗೆ ಆಯುರ್ವೇದದಲ್ಲಿಏನು ಪರಿಹಾರವಿದೆ ಇಲ್ಲಿ ನೋಡಿ.

Photo Credit: Instagram, Facebook

ಆಯುರ್ವೇದದ ಪ್ರಕಾರ ನಿಂಬೆ ರಸ ಮತ್ತು ಜೇನು ತುಪ್ಪ ಬೆರೆಸಿದ ನೀರು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು

ಶುಂಠಿ, ದಾಲ್ಚಿನ್ನಿ ಇತ್ಯಾದಿಗಳನ್ನು ಬಳಸಿ ಮಾಡುವ ಹರ್ಬಲ್ ಟೀಯನ್ನು ಸೇವನೆ ಮಾಡಿ

ಅಶ್ವಗಂಧ ಸೇವನೆಯಿಂದ ಹಾರ್ಮೋನ್ ಬಿಡುಗಡೆ ಸರಿಯಾಗಿ ಅಸಹಜ ತೂಕ ಹೆಚ್ಚಳ ತಡೆಯಬಹುದು

ಚಯಾಪಚಯ ಕ್ರಿಯೆ ಸರಿಮಾಡುವ ತ್ರಿಫಲ ಚೂರ್ಣವನ್ನು ನೀರಿಗೆ ಹಾಕಿ ಸೇವನೆ ಮಾಡಿ

ಪ್ರತಿ ದಿನ ಯೋಗ ಮತ್ತು ವ್ಯಾಯಾಮ ಮಾಡುವುದು ತೂಕ ಇಳಿಕೆಗೆ ಸುಲಭ ದಾರಿ

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವನೆಯಿಂದ ತೂಕ ಇಳಿಕೆ ಮಾಡುವುದು ಸುಲಭ

ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ