ಮೂಲಂಗಿ ಜೊತೆ ಮೊಸರು ಸೇವನೆಯ ಲಾಭಗಳು

ಗಟ್ಟಿ ಮೊಸರಿಗೆ ಮೂಲಂಗಿ ತುರಿದು ಹಾಕಿ ಅದಕ್ಕೆ ಕೊಂಚ ಸಕ್ಕರೆ ಅಥವಾ ಉಪ್ಪು ಸೇರಿಸಿ ತಿಂದು ನೋಡಿದ್ದೀರಾ? ಹಾಗಿದ್ದರೆ ಈಗಲೇ ಟ್ರೈ ಮಾಡಿ. ಈ ರೀತಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟೊಂದು ಲಾಭಗಳಿವೆ ತಿಳಿದುಕೊಳ್ಳಿ.

credit: social media

ಬೇಸಿಗೆಯಲ್ಲಿ ದೇಹ ಉಷ್ಣತೆಗೊಳಗಾದಾಗ ಮೂಲಂಗಿ ಜೊತೆ ಮೊಸರು ಸೇರಿಸಿ ಸೇವಿಸಿ

ಇವೆರಡರ ಮಿಶ್ರಣದಲ್ಲಿ ವಿಟಮಿನ್ ಸಿ ಹೆಚ್ಚಿದ್ದು, ರಕ್ತ ಶುದ್ಧಿ ಮಾಡುವ ಗುಣವೂ ಇರುತ್ತದೆ.

ಬೇಸಿಗೆಯ ಬೇಗೆಗೆ ದೇಹ ಬೇಗನೇ ದಣಿಯುವುದಕ್ಕೆ ಮೂಲಂಗಿ ಜೊತೆ ಮೊಸರು ಸೇವಿಸಿ

ಮೂಲಂಗಿ ಮತ್ತು ಮೊಸರು ತಂಪು ಗುಣ ಹೊಂದಿದ್ದು, ಹೊಟ್ಟೆ ಉರಿ ಕಡಿಮೆ ಮಾಡುತ್ತದೆ

ಹಸಿ ಮೂಲಂಗಿ ಮತ್ತು ಮೊಸರು ಚರ್ಮದ ಕಾಂತಿ ಹೆಚ್ಚಿಸುವ ಗುಣ ಹೊಂದಿದೆ.

ಜೀರ್ಣಕ್ರಿಯೆ ಸುಗಮಗೊಳಿಸುವ ಇವೆರಡರ ಮಿಶ್ರಣದಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ

ದೇಹಕ್ಕೆ ತಂಪು ಜೊತೆಗೆ ದೇಹ ಹೆಚ್ಚು ಬೆವರಿ ಅಸಹ್ಯವಾಗುವುದು ತಪ್ಪುತ್ತದೆ.