ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇಟ್ಟುಕೊಳ್ಳುವ ವಸ್ತುಗಳಲ್ಲಿ ನಿಂಬೆ ಹಣ್ಣು ಕೂಡಾ ಒಂದು. ಹಾಗಂತ ನಿಂಬೆ ಹಣ್ಣು ಅಡುಗೆಗೆ ಮಾತ್ರವಲ್ಲ, ಬೇರೆ ಕೆಲಸಗಳಿಗೂ ಸಹಾಯವಾಗುತ್ತದೆ. ಅಡುಗೆ ಹೊರತಾಗಿ ನಿಂಬೆಯ ಉಪಯೋಗವೇನು ನೋಡಿ.
Photo Credit: Instagram
ಪಾತ್ರೆಯಲ್ಲಿ ಎಣ್ಣೆ ಜಿಡ್ಡು ಇದ್ದಾಗ ನಿಂಬೆ ಹಣ್ಣಿನ ಹೋಳಿನಿಂದ ಉಜ್ಜಿದರೆ ಜಿಡ್ಡು ಹೋಗುತ್ತದೆ
ಬಟ್ಟೆಗೆ ಕಲೆಯಾದಾಗ ನಿಂಬೆ ಹಣ್ಣಿನಿಂದ ಕಲೆಯಾದ ಜಾಗ ತಿಕ್ಕಿದರೆ ಕಲೆ ಹೋಗುತ್ತದೆ
ಶೂ ಹೊಳಪು ಕಳೆದುಕೊಂಡಿದ್ದಲ್ಲದೆ, ನಿಂಬೆ ಹಣ್ಣಿನ ಹೋಳಿನಿಂದ ಪಾಲಿಶ್ ಮಾಡಬಹುದು
ಅಡುಗೆ ಮನೆಯ ಸಿಂಕ್ ಕೊಳೆಯಾಗಿದ್ದಾಗ ಕ್ಲೀನ್ ಮಾಡಲು ನಿಂಬೆ ರಸ ಬಳಸಬಹುದು
ವಿನೇಗರ್ ಬದಲಿಗೆ ಗ್ಯಾಸ್ ಸ್ಟವ್ ಕ್ಲೀನ್ ಮಾಡಲು ನಿಂಬೆ ರಸ ಬಳಸಬಹುದು
ನಾಲಿಗೆ ರುಚಿ ಕಳೆದುಕೊಂಡಿದ್ದರೆ ನಿಂಬೆ ಹೋಳಿನಿಂದ ತಿಕ್ಕಿಕೊಂಡರೆ ಸರಿ ಹೋಗುತ್ತದೆ
ಟೈಲ್ಸ್ ನೆಲದ ಮೇಲೆ ಎಣ್ಣೆ, ಪದಾರ್ಥದ ಕಲೆಯಾಗಿದ್ದರೆ ನಿಂಬೆ ಹೋಳಿನಿಂದ ಉಜ್ಜಿಕೊಳ್ಳಬಹುದು