ಒಣಕೆಮ್ಮಿಗೆ ಬೆಸ್ಟ್ ಮನೆಮದ್ದು

ಇತ್ತೀಚೆಗಿನ ದಿನಗಳಲ್ಲಿ ಕೆಮ್ಮು ಬೇಗನೇ ಬಿಟ್ಟುಹೋಗುವುದಿಲ್ಲ. ಎಷ್ಟೇ ಔಷಧಿ ಸೇವಿಸಿದರೂ ಪ್ರಯೋಜನವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮನೆ ಮದ್ದುಗಳೇ ಉಪಯೋಗಕ್ಕೆ ಬರುವುದು. ಬಿಡದೇ ಕಾಡುವ ಒಣ ಕೆಮ್ಮಿಗೆ ಪರಿಹಾರವೇನು ನೋಡೋಣ.

credit: social media

ಪ್ರತಿ ನಿತ್ಯ ನೀರು ಕುಡಿಯುವಾಗಲೆಲ್ಲಾ ಹದ ಬಿಸಿ ನೀರನ್ನೇ ಸೇವಿಸುವುದು ಉತ್ತಮ.

ಪ್ರತಿ ನಿತ್ಯ ಎರಡು ಬಾರಿ ಬಿಸಿ ನೀರಿನಿಂದ ಅಥವಾ ಉಪ್ಪು ನೀರಿನಿಂದ ಗಾರ್ಗಲ್ ಮಾಡಿ.

ಶುಂಠಿ ರಸಕ್ಕೆ ಕೊಂಚ ಜೇನು ತುಪ್ಪ ಸೇರಿಸಿ ಆಗಾಗ ಸೇವಿಸುತ್ತಿರಿ.

ಸಂಸ್ಕರಿದ ಜೇನು ತುಪ್ಪವನ್ನು ಹಾಗೆಯೇ ಸೇವಿಸುವುದು ಉತ್ತಮ.

ಪುದೀನಾ ಎಲೆಯನ್ನು ಜಗಿಯುತ್ತಿರಿ.

ಶುಂಠಿ, ಕಾಳುಮೆಣಸು ಬಳಸಿ ಮಸಾಲಾ ಚಹಾ ಮಾಡಿ ಸೇವಿಸಿ

ಯಾವುದೇ ಔಷಧಿಗಳನ್ನು ಪ್ರಯೋಗಿಸುವ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸಿ ಬಳಸಿ.