ಯಾವ ಅಂಗಾಂಗಕ್ಕೆ ಯಾವ ಜ್ಯೂಸ್ ಬೆಸ್ಟ್

ನಮ್ಮ ದೇಹದ ವಿವಿಧ ಅಂಗಾಂಗಳು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಕೆಲವೊಂದು ಆರೋಗ್ಯಕರ ಪಾನೀಯಗಳು ಅಥವಾ ಜ್ಯೂಸ್ ಸಹಕಾರಿಯಾಗಿದೆ. ಯಾವ ಅಂಗಾಂಗಕ್ಕೆ ಯಾವ ಜ್ಯೂಸ್ ಸೇವಿಸಿದರೆ ಸೂಕ್ತ ಎಂದು ನೋಡೋಣ.

credit: social media

ಮೆದುಳಿನ ಆರೋಗ್ಯ ಕಾಪಾಡಲು ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಕುಡಿಯುವುದು ಉತ್ತಮ

ವಿಟಮಿನ್ ಸಿ,ಎ ಇರುವ ಕಿತ್ತಳೆ, ಕ್ಯಾರೆಟ್ ಜ್ಯೂಸ್ ಸೇವನೆ ಶ್ವಾಸಕೋಶಗಳ ಆರೋಗ್ಯಕ್ಕೆ ಉತ್ತಮ

ವಿಟಮಿನ್ ಎ, ಕ್ಯಾರೊಟಿನ್ ಅಂಶವಿರುವ ಕ್ಯಾರೆಟ್ ಜ್ಯೂಸ್ ಕೂದಲಗಳ ಸಂರಕ್ಷಣೆಗೆ ಉತ್ತಮ

ಕ್ಯಾರೆಟ್ ಮತ್ತು ಆರೆಂಜ್ ಜ್ಯೂಸ್ ಸೇವನೆಯಿಂದ ಕಣ್ಣುಗಳ ಆರೋಗ್ಯ ಸುರಕ್ಷಿತವಾಗಿರುತ್ತದೆ

ನಿಂಬೆ ಪಾನಕ, ದಾಳಿಂಬೆ ಜ್ಯೂಸ್ ಸೇವನೆಯು ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ

ನಿಂಬೆ, ಆಪಲ್, ಸೌತೆಕಾಯಿಯ ಜ್ಯೂಸ್ ಸೇವಿಸುವುದರಿಂದ ನಮ್ಮ ಚರ್ಮ ಕಾಂತಿಯುಕ್ತವಾಗಿರುತ್ತದೆ

ಸೌತೆಕಾಯಿ, ಕಿವಿ ಹಣ್ಣುಗಳ ಜ್ಯೂಸ್ ಸೇವಿಸುವುದರಿಂದ ಕರುಳಿನ ಆರೋಗ್ಯ ಸುರಕ್ಷಿತವಾಗಿರುತ್ತದೆ