ಅಡುಗೆಗೆ ಉಪ್ಪು ಹೆಚ್ಚಾದ್ರೆ ಈ ಟ್ರಿಕ್ ಮಾಡಿ ನೋಡಿ

ಅಡುಗೆ ಪದಾರ್ಥಕ್ಕೆ ಉಪ್ಪು ಹೆಚ್ಚಾದ್ರೆ ಅದನ್ನು ಸರಿ ಮಾಡೋದು ಹೇಗೆ ಎಂಬುದೇ ತಲೆನೋವು. ಅದಕ್ಕೆ ಇಲ್ಲಿದೆ ಒಂದು ಸಿಂಪಲ್ ಉಪಾಯ.

Photo Credit: Instagram

ಅಡುಗೆಗೆ ಉಪ್ಪು ಹೆಚ್ಚಾದರೆ ಅದನ್ನು ತೆಗೆಯಲು ಗೋಧಿ ಹಿಟ್ಟು ಇದ್ದರೆ ಸಾಕು

ಗೋಧಿ ಹಿಟ್ಟನ್ನು ಚಪಾತಿ ಹಿಟ್ಟಿನ ರೀತಿ ಕಲಸಿಕೊಳ್ಳಿ

ಈಗ ಇದನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ

ಉಪ್ಪು ಹೆಚ್ಚಾದ ಆಹಾರ ಪದಾರ್ಥಕ್ಕೆ ಈ ಉಂಡೆ ಹಾಕಿ ಕುದಿಸಿ

ಈಗ ಗೋಧಿ ಹಿಟ್ಟಿನ ಉಂಡೆ ಉಪ್ಪು ಹೀರಿಕೊಳ್ಳುತ್ತವೆ.

ಐದು ನಿಮಿಷ ಕುದಿಸಿದ ಬಳಿಕ ಗೋಧಿ ಹಿಟ್ಟಿನ ಉಂಡೆಗಳನ್ನು ತೆಗೆಯಿರಿ

ಈಗ ನಿಮ್ಮ ಅಡುಗೆಗೆ ಹೆಚ್ಚಾಗಿದ್ದ ಉಪ್ಪು ಹದವಾಗಿ ಬಿಟ್ಟಿರುತ್ತದೆ