ಹಾಗಲಕಾಯಿ ದೇಹದ ತೂಕ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ
ಹಾಗಲಕಾಯಿ ಕಹಿಗೆ ಹೆಸರುವಾಸಿಯಾಗಿದೆ. ಅದರ ಸೇವನೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರಾಚೀನ ಕಾಲದಿಂದಲೂ ಔಷಧಿಗಳಲ್ಲಿ ಮತ್ತು ಆಹಾರ ತರಕಾರಿಗಳಲ್ಲಿ ಇದನ್ನು ಬಳಸುತ್ತಾರೆ. ನಿಮ್ಮಲ್ಲಿ ಹಲವರಿಗೆ ಹಾಗಲಕಾಯಿಯೆಂದರೆ ಸ್ವಲ್ಪ ತಿರಸ್ಕಾರವೇ ಇರಬಹುದು. ಆದರೆ ಇದು ಕಹಿಯಾದಷ್ಟೇ ಉತ್ತಮ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ತಲೆನೋವು, ಗಂಟುಗಳಲ್ಲಿ ನೋವು ಮತ್ತು ಮದುಮೇಹದಂತಹ ಗಂಭೀರ ಕಾಯಿಲೆಗಳನ್ನೇ ದೂರಮಾಡುವ ಶಕ್ತಿಯನ್ನು ಹೊಂದಿದೆ.
photo credit social media