ಬೇಸಿಗೆಯಲ್ಲಿ ಮಸಾಲಾ ಮಜ್ಜಿಗೆಯ ಉಪಯೋಗಗಳು

ಬೇಸಿಗೆಯಲ್ಲಿ ತೀರಾ ದಾಹವಾದಾಗ ಮಜ್ಜಿಗೆ ಸೇವನೆ ಮಾಡುವುದನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಮಸಾಲ ಮಜ್ಜಿಗೆ ನಾಲಿಗೆಗೆ ರುಚಿಕರವಾಗಿರುತ್ತದೆ. ಮಸಾಲ ಮಜ್ಜಿಗೆಯನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನವಿದೆ ನೋಡೋಣ.

credit: social media

ಬೇಸಿಗೆಯಲ್ಲಿ ಹೊಟ್ಟೆ ಮತ್ತು ನಾಲಿಗೆ ತಂಪಾಗಿಸಲು ಮಜ್ಜಿಗೆ ಅತ್ಯಂತ ಆರೋಗ್ಯಕರ ಪೇಯವಾಗಿದೆ.

ಮಜ್ಜಿಗೆಯಲ್ಲಿರುವ ವಿಟಮಿನ್ ಸಿ ಅಂಶ ಹೇರಳವಾಗಿದ್ದು, ಇದು ಬೇಸಿಗೆಯಲ್ಲಿ ದೇಹ ನಿಶ್ಯಕ್ತಿಯಾಗದಂತೆ ನೋಡಿಕೊಳ್ಳುತ್ತದೆ

ಮಜ್ಜಿಗೆಯಲ್ಲಿ ಕ್ಯಾಲ್ಶಿಯಂ ಮತ್ತು ರಂಜಕದ ಅಂಶಗಳು ಹೇರಳವಾಗಿದ್ದು ದೇಹಕ್ಕೆ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ

ವಿಟಮಿನ್ ಸಿ ಅಂಶವಿರುವ ಕಾರಣ ಮಜ್ಜಿಗೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ

ಮಸಾಲ ಮಜ್ಜಿಗೆ ಮಾಡುವಾಗ ಶುಂಠಿ ಬಳಸುವುದರಿಂದ ನಮ್ಮ ಜೀರ್ಣ ಶಕ್ತಿ ವೃದ್ಧಿಯಾಗುತ್ತದೆ

ಅಜೀರ್ಣ, ಹೊಟ್ಟೆ ಉರಿ, ಹೊಟ್ಟೆ ಉಬ್ಬರಿಸಿದಂತಾಗುವುದು ಇತ್ಯಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡುತ್ತದೆ

ಮಸಾಲ ಮಜ್ಜಿಗೆಗೆ ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪು ಬಳಸುವುದರಿಂದ ಗ್ಯಾಸ್ಟ್ರಿಕ್ ಅಂಶ ಹೊರಹಾಕುತ್ತದೆ