ಸಾಮಾನ್ಯವಾಗಿ ನಾವು ಮೂಲಂಗಿಯ ಗಡ್ಡೆ ಸಾಂಬಾರ್ ಗೆ ಬಳಸಿ, ಸೊಪ್ಪನ್ನು ಬಿಸಾಕಿ ಬಿಡುತ್ತೇವೆ. ಆದರೆ ಮೂಲಂಗಿ ಗಡ್ಡೆಗಿಂತಲೂ ಅದರ ಸೊಪ್ಪಿನಲ್ಲಿ ಹೆಚ್ಚು ಪೋಷಕಾಂಶಗಳಿವೆ. ಹೀಗಾಗಿ ಮುಂದಿನ ಬಾರಿ ಮೂಲಂಗಿ ಸೊಪ್ಪನ್ನು ತಪ್ಪದೇ ಬಳಸಿ
Photo Credit: Social Media
ಪೋಷಕಾಂಶ ಭರಿತ ಮೂಲಂಗಿ ಸೊಪ್ಪನ್ನು ಸಾಂಬಾರ್ ಅಥವಾ ಪಲ್ಯ ಮಾಡಿ ಸೇವಿಸಬಹುದು
ಮೂಲಂಗಿ ಸೊಪ್ಪಿನಲ್ಲಿ ವಿಟಮಿನ್ ಸಿ, ಫೋಲಿಕ್ ಆಸಿಡ್ ಅಂಶ ಹೇರಳವಾಗಿದ್ದು ಗರ್ಭಿಣಿ ಸ್ತ್ರೀಯರಿಗೂ ಉತ್ತಮ
ವಿಟಮಿನ್ ಸಿ ಅಂಶವಿರುವ ಕಾರಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಣ ಹೊಂದಿದೆ
ಕಾಮಾಲೆ ರೋಗ ಪೀಡಿತರಿಗೆ ಮೂಲಂಗಿ ಸೊಪ್ಪಿನ ಸೇವನೆ ಅತ್ಯಂತ ಆರೋಗ್ಯಕರವಾಗಿದೆ
ಮಧುಮೇಹಿಗಳು ಮೂಲಂಗಿ ಸೊಪ್ಪನ್ನು ಹೇರಳವಾಗಿ ಬಳಸುವುದರಿಂದ ಮಧುಮೇಹ ನಿಯಂತ್ರಿಸಬಹುದು
ಪೈಲ್ಸ್ ಅಥವಾ ಮಲಬದ್ಧತೆಯಂತಹ ಸಮಸ್ಯೆಯಿರುವವರು ಮೂಲಂಗ ಸೊಪ್ಪನ್ನು ಸೇವಿಸಿ
ದೇಹದಲ್ಲಿರುವ ವಿಷಕಾರೀ ಅಂಶವನ್ನು ಹೊರಹಾಕುವ ಸಾಮರ್ಥ್ಯವಿದ್ದು, ಪಿತ್ತಕೋಶದ ಆರೋಗ್ಯಕ್ಕೂ ಉತ್ತಮ.