ರಾಗಿಯನ್ನು ಹೆಚ್ಚಾಗಿ ತೂಕ ಇಳಿಕೆ ಮಾಡುವವರು ತಮ್ಮ ಆಹಾರ ಕ್ರಮದಲ್ಲಿ ಬಳಕೆ ಮಾಡುವರು. ಆದರೆ ರಾಗಿಯ ಸೇವನೆಯು ಪ್ರತಿಯೊಬ್ಬರ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ರಾಗಿಯನ್ನು ಹಲವಾರು ವಿಧದಿಂದ ಬಳಕೆ ಮಾಡಬಹುದು.
photo credit social media
ಇದರಲ್ಲಿ ಆಹಾರದ ನಾರಿನಾಂಶವಿದ್ದು, ಹೊಟ್ಟೆ ತುಂಬಿರುವಂತೆ ಮಾಡುವುದು. ರಾಗಿಯ ಯಾವುದೇ ಖಾದ್ಯ ಸೇವನೆ ಮಾಡಿದರೆ, ಅದರ ಬಳಿಕ ನಿಮಗೆ ಅನಗತ್ಯ ಬೇರೆ ತಿಂಡಿಗಳನ್ನು ಸೇವಿಸಬೇಕಾಗಿಲ್ಲ. ಇದು ಬಯಕೆಯನ್ನು ನಿಯಂತ್ರಣದಲ್ಲಿಟ್ಟು, ತೂಕ ಇಳಿಸಲು ಸಹಕಾರಿ. ಬೆಳಗ್ಗೆ ರಾಗಿ ಸೇವನೆ ಮಾಡಿದರೆ, ಅದು ತುಂಬಾ ಲಾಭಕಾರಿ.
ರಾಗಿಯ ಸೇವನೆ ಮಾಡಿದರೆ, ಅದು ದೇಹದಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು ಹಾಗೂ ಚರ್ಮವು ಯೌವನಯುತವಾಗಿ ಇರುವಂತೆ ಮಾಡುವುದು. ಮೆಥಿಯೋನಿನ್ ಮತ್ತು ಲೈಸಿನ್ ಆಮ್ಲವು ಚರ್ಮದಲ್ಲಿ ಜೋತು ಬೀಳುವುದನ್ನು ತಪ್ಪಿಸುವುದು ಹಾಗೂ ನೆರಿಗೆ ದೂರ ಮಾಡುವುದು.
ರಾಗಿಯಲ್ಲಿ ಆಹಾರದ ನಾರಿನಾಂಶವಿದ್ದು, ಇದು ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು. ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುವುದು.
ಬೇರೆಲ್ಲಾ ಧಾನ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅಂಶವು ರಾಗಿಯಲ್ಲಿದೆ. ದೇಹದಲ್ಲಿ ಮೂಳೆ, ಹಲ್ಲು ಮತ್ತು ಉಗುರುಗಳ ಆರೋಗ್ಯ ಕಾಪಾಡಲು ಕ್ಯಾಲ್ಸಿಯಂ ಅತೀ ಅಗತ್ಯ. 100 ಗ್ರಾಂ ರಾಗಿಯಲ್ಲಿ 344 ಮಿ.ಗ್ರಾಂ. ಕ್ಯಾಲ್ಸಿಯಂ ಇದ್ದು, ಇದು ದೇಹಕ್ಕೆ ಲಾಭಕಾರಿ. ಬೆಳೆಯುತ್ತಿರುವ ಮಕ್ಕಳಿಗೆ ರಾಗಿ ನೀಡಿದರೆ ತುಂಬಾ ಒಳ್ಳೆಯದು.
ರಾಗಿಯು ಆತಂಕ, ನಿದ್ರಾಹೀನತೆ ಮತ್ತು ಖಿನ್ನತೆ ದೂರವಿಡಲು ಸಹಕಾರಿ. ರಾಗಿ ಸೇವನೆ ಮಾಡಿದರೆ, ಅದರಿಂದ ದೇಹ ಮತ್ತು ಮನಸ್ಸು ಉಲ್ಲಾಸಿತವಾಗುವುದು.
ರಾಗಿ ಸೇವನೆ ಮಾಡಿದರೆ, ಮೈಗ್ರೇನ್ ಕೂಡ ಕಡಿಮೆ ಆಗುವುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಮುಂದಿನ ಸಲ ಮನಸ್ಸಿಗೆ ಉಲ್ಲಾಸ ಬೇಕಿದ್ದರೆ, ರಾಗಿ ಸೇವನೆ ಮಾಡಿ.
ರಾಗಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ನಿಮಗೆ ಈ ತಿಳಿದಿರಬಹುದು. ಹೀಗಾಗಿ ನೀವು ಇದನ್ನು ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ, ಆಗ ಖಂಡಿತವಾಗಿಯೂ ತುಂಬಾ ಲಾಭಕಾರಿ ಆಗಲಿದೆ. ಇದನ್ನು ನೀವು ದೋಸೆ, ರೋಟಿ ಇತ್ಯಾದಿಗಳ ಮೂಲಕ ಸೇವನೆ ಮಾಡಬಹುದು.