ಗೋಧಿ ರೊಟ್ಟಿ ತಿನ್ನಿ ರಕ್ತದೊತ್ತಡ ನಿಯಂತ್ರಿಸಿ

ನಿಮಗೆ ಗೊತ್ತೆ ಯಾಕೆ ಬಹಳ ಜನ ಮೈದಾಗಿಂತ ಗೋಧಿಯನ್ನೇ ಹೆಚ್ಚಾಗಿ ಬಳಸುವರೆಂದು? ಹಲವರಿಗೆ ಗೋಧಿಯ ಪ್ರಯೋಜನಗಳು ಅಷ್ಟಾಗಿ ತಿಳಿದಿಲ್ಲ. ನಮಗೆ ಗೋಧಿಯ ಮಹತ್ವ ತಿಳಿದಿರದೆ ಇದ್ದರೂ ಸುಮ್ಮನೆ ಗೋಧಿಯನ್ನು ಬಳಸುತ್ತಿರುತ್ತೇವೆ. ಬೋಲ್ಡ್ ಸ್ಕೈ ನಿಮ್ಮೊಂದಿಗೆ ಯಾಕೆ ಗೋಧಿಯನ್ನು ಬಳಸಬೇಕು ಅದರ ಮಹತ್ವವೇನು ಎಂದು ತಿಳಿಸಿಕೊಡುತ್ತದೆ.

photo credit social media

ಪರಿಣಿತರ ಪ್ರಕಾರ ಮೈದಾಗಿಂತ ಗೋಧಿಯಲ್ಲಿ ಹೆಚ್ಚಿನ ಆರೋಗ್ಯಕಾರಿ ಅಂಶಗಳಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಮೈದಾಗಿಂತ ಗೋಧಿ ಹಗುರವಾದ ವಸ್ತು. ಗೋಧಿಯ ರೋಟಿಗಳನ್ನು ಹಳೆಯ ತಲೆಮಾರಿನವರು ತಿನ್ನುತ್ತಿದ್ದರು. ಆದರೆ ಇಂದು ಇದರ ಮಹತ್ವ ಅರಿತು ಯುವ ಪೀಳಿಗೆಯವರು ಕೂಡ ಬಳಸುತ್ತಿದ್ದಾರೆ.

ರಕ್ತವನ್ನು ಶುದ್ದೀಕರಿಸಲು ಇರುವ ಉತ್ತಮ ಮಾರ್ಗವೆಂದರೆ ಗೋಧಿಯನ್ನು ದಿನದ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳುವುದು. ದಿನವೂ ಗೋಧಿಯನ್ನು ತಿನ್ನುವುದರಿಂದ ರಕ್ತಶುದ್ಧೀಕರಣವಾಗುತ್ತದೆ.

ನೀವು ನಿಮ್ಮ ತೂಕದ ಬಗ್ಗೆ ಚಿಂತಿತರಾಗಿದ್ದಲ್ಲಿ ಮೈದಾ ಬದಲಿಗೆ ಗೋಧಿಯನ್ನು ಬಳಸಿ. ಗೋಧಿ ಕ್ಯಾಲೊರಿಗಳನ್ನು ಕಡಿಮೆಗೊಳಿಸಿ ಅದನ್ನು ನಿಯಂತ್ರಣದಲ್ಲಿಡುತ್ತದೆ.

ವಯಸ್ಸಾದವರು ಗೋಧಿಯನ್ನು ಬಳಸಲು ಮುಖ್ಯ ಕಾರಣ ಇದು. ಮೈದಾಕ್ಕಿಂತ ಇದು ಸುಲಭವಾಗಿ ಜೀರ್ಣವಾಗುತ್ತದೆ. ಹೃದಯ ಸಂಬಂಧಿ ಖಾಯಿಲೆಗಳಿಂದ ನರಳುತ್ತಿರುವವರು ಗೋಧಿಯನ್ನು ಬಳಸುವುದರಿಂದ ಹೃದಯವು ಗಟ್ಟಿಗೊಳ್ಳುತ್ತದೆ. ಗೋಧಿ ಹಿಟ್ಟನ್ನು ಬ್ಲೀಚ್ ಮಾಡಿರುವುದಿಲ್ಲ ಮತ್ತು ಬೇರೆ ಯಾವುದೇ ರೀತಿಯ ವಸ್ತುಗಳನ್ನು ಇದರಲ್ಲಿ ಬೆರೆಸಿರುವುದಿಲ್ಲ.

ಗೋಧಿಯಲ್ಲಿ ವಿಟಮಿನ್ ಇ, ಸೆಲೆನಿಯಂ ಮತ್ತು ಫೈಬರ್ ಇರುತ್ತದೆ. ಇದು ಮಾರಣಾಂತಿಕ ಖಾಯಿಲೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ.

ಬಹಳಷ್ಟು ಮಂದಿ ಹೈಪರ್ ಮತ್ತು ಹೈಪೊ ಥೈರಾಯ್ಡಿನಿಂದ ಬಳಲುತ್ತಿದ್ದಾರೆ. ನಿಮಗೂ ಈ ಸಮಸ್ಯೆಯಿದ್ದಲ್ಲಿ ಗೋಧಿಯನ್ನು ನಿಮ್ಮ ಡಯೆಟ್ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ಹಲವು ಮಂದಿ ಮೂಳೆಯ ಉರಿಯಿಂದ ತೊಂದರೆ ಅನುಭವಿಸುತ್ತಾರೆ. ಇದರಿಂದ ಹೊರಬರಲು ಇರುವ ಉತ್ತಮ ಮಾರ್ಗವೆಂದರೆ ಗೋಧಿಯ ರೋಟಿಗಳು ಅಥವ ಬ್ರೆಡ್ ತಿನ್ನುವುದು. ಇದನ್ನು ಬಳಸುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು.

ಮಧುಮೇಹಿಗಳು ತಾವು ತಿನ್ನುವ ಆಹಾರದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇನ್ಸುಲಿನ್ ಪರಿಣಾಮಕಾರಿಯಾಗಲು ಇರುವ ಏಕೈಕ ಮಾರ್ಗವೆಂದರೆ ಗೋಧಿಯನ್ನು ನಿಮ್ಮ ಡಯೆಟ್ ನಲ್ಲಿ ಒಳಗೊಳ್ಳುವುದು.

ಗೋಧಿಯಲ್ಲಿ ಫೈಬರ್ ಹೆಚ್ಚಿದ್ದು ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಲಬದ್ಧತೆಯ ಸಮಸ್ಯೆಯಿದ್ದಲ್ಲಿ ಗೋಧಿಯನ್ನು ದಿನವೂ ಬಳಸುವುದು ಒಳ್ಳೆಯದು.