​ಅಸ್ತಮಾ ಮತ್ತು ಶೀತಕ್ಕೆ ರಾಮಬಾಣ ಜೀರಿಗೆ

ಒಗ್ಗರಣೆಯ ಅಡುಗೆಗಳಿಗೆ ಇತರ ಮಸಾಲೆ ಪದಾರ್ಥಗಳ ಜೊತೆ ಸೇರಿಸಿ ಅಡುಗೆಯ ಸ್ವಾದ ಹೆಚ್ಚಿಸಲು ಬಳಸಲಾಗುವ ಜೀರಿಗೆ ತನ್ನ ಗುಣ ವೈಶಿಷ್ಟ್ಯದಿಂದ ಜನರ ಆರೋಗ್ಯವನ್ನೂ ಕಾಪಾಡುವ ಆಹಾರ ಪದಾರ್ಥವಾಗಿ ಉಪಯೋಗಿಸಲ್ಪಡುತ್ತದೆ. ಅಡುಗೆಗೆ ಜೀರಿಗೆಯ ಉಪಯೋಗದ ನಂತರ ರುಚಿಯ ಜೊತೆಗೆ ಘಮಗುಡುವ ಪರಿಮಳ ಸಹ ಹೊರಹೊಮ್ಮುತ್ತದೆ.

photo credit social media

ಅಜೀರ್ಣತೆಯಿಂದ ಬಳಲುತ್ತಿರುವವರು ಜೀರಿಗೆ ಕಾಳುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ತಮ್ಮ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಜೀರಿಗೆ ಕಾಳುಗಳಲ್ಲಿ " ಥೈಮಾಲ್ " ಎಂಬ ಸಂಯುಕ್ತ ಇದ್ದು, ಜೊತೆಗೆ ಇನ್ನಿತರ ಬಹು ಮುಖ್ಯ ಎಣ್ಣೆಯ ಅಂಶಗಳು ಸೇರಿವೆ.

ಜೀರಿಗೆ ಕಾಳುಗಳಲ್ಲಿ ಅತಿ ಹೆಚ್ಚಿನ ನಾರಿನ ಅಂಶ ಇದ್ದು, ಇದು ಜೀರ್ಣಾಂಗ ವ್ಯೂಹದ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಇದರ ಜೊತೆ ಎಂಜೈಮ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಜೀರಿಗೆ ಕಾಳುಗಳನ್ನು ನೈಸರ್ಗಿಕ ವಿರೇಚಕಗಳು ಎಂದು ಕರೆಯುತ್ತಾರೆ. ಈ ಗುಣ ಲಕ್ಷಣಗಳಿಂದ ಜೀರಿಗೆ ಕಾಳುಗಳು ವಿಪರೀತ ಜೀರ್ಣ ಕ್ರಿಯೆಯ ಅಸ್ವಸ್ಥತೆ ಎಂದು ಗುರುತಿಸಿಕೊಂಡ ' ಪೈಲ್ಸ್ ' ಅಥವಾ ಮೊಳೆರೋಗ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ.

ಮಲಬದ್ಧತೆಯ ನಿವಾರಣೆಗಾಗಿ, ಒಂದು ಟೇಬಲ್ ಚಮಚದಷ್ಟು ಜೀರಿಗೆ ಕಾಳುಗಳನ್ನು ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಹುರಿದ ಜೀರಿಗೆ ಕಾಳುಗಳನ್ನು ಮಿಕ್ಸರ್ ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಹಸಿ ಜೇನು ತುಪ್ಪ ಸೇರಿಸಿ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಜೀರಿಗೆಯಲ್ಲಿರುವ ಆಂಟಿ - ಬ್ಯಾಕ್ಟೀರಿಯಲ್ ಮತ್ತು ಆಂಟಿ - ಇಂಪ್ಲಾಮೇಟರಿ ಗುಣ ಲಕ್ಷಣಗಳಿಂದ ಯಾವುದೇ ಬಗೆಯ ಶೀತ ಮತ್ತು ಕೆಮ್ಮಿಗೆ ಒಳ್ಳೆಯ ಮನೆ ಮದ್ದಾಗಿ ಪ್ರಸಿದ್ಧಿ ಪಡೆದಿದೆ. ಜೀರಿಗೆ ಕಾಳುಗಳಲ್ಲಿರುವ ಸಂಯುಕ್ತಗಳು ದೇಹದಲ್ಲಿ ಉರಿಯೂತದಿಂದ ಬಳಲುತ್ತಿರುವ ಮಾಂಸ ಖಂಡಗಳನ್ನು ಗುಣ ಪಡಿಸಿ ಸೋಂಕುಗಳ ವಿರುದ್ಧ ಹೋರಾಡುವಂತೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಒಂದು ಟೇಬಲ್ ಚಮಚದಷ್ಟು ಜೀರಿಗೆ ಕಾಳುಗಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ. ಈ ಮಿಶ್ರಣವನ್ನು ಸ್ಟವ್ ಮೇಲೆ ಚೆನ್ನಾಗಿ ಕುದಿಸಿ. ಕುದಿಯುತ್ತಿರುವಾಗ ಸಣ್ಣಗೆ ಹೆಚ್ಚಿದ ಶುಂಠಿಯನ್ನು ಹಾಕಿ ಮತ್ತೊಮ್ಮೆ ಕುದಿಸಿ. ಇದನ್ನು ಸೋಸಿ ಒಂದು ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿ.

ಜೀರಿಗೆ ಕಾಳುಗಳಲ್ಲಿನ ಗುಣ ಲಕ್ಷಣಗಳು ಗರ್ಭಿಣಿ ಮಹಿಳೆಯರಲ್ಲಿ ಮಲಬದ್ಧತೆಯನ್ನು ನಿವಾರಿಸಿ ಜೀರ್ಣ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸುತ್ತದೆ. ಜೀರಿಗೆ ಕಾಳುಗಳು ಗರ್ಭಾವಸ್ಥೆಯ ಸಮಸ್ಯೆಗಳಾದ ಅಜೀರ್ಣತೆ, ವಾಕರಿಕೆ ಮತ್ತು ವಾಂತಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತವೆ.

ಇವುಗಳು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸುವುದರ ಜೊತೆಗೆ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಒಂದು ವೇಳೆ ನೀವು ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಜೀರಿಗೆ ಚಹಾವನ್ನು ದಿನಕ್ಕೆ ಮೂರು ಬಾರಿಯಂತೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.