ಪ್ರತಿ ನಿತ್ಯ ಊಟದ ವೇಳೆ ಅಥವಾ ನಂತರ ಎಲ್ಲರೂ ಮೊಸರು ಸೇವಿಸಲು ಇಷ್ಟಪಡುತ್ತಾರೆ. ಆದರೆ ಮೊಸರು ಸೇವಿಸುವಾಗ ಕೆಲವರು ಸಕ್ಕರೆ ಬಳಸಿದರೆ ಮತ್ತೆ ಕೆಲವರು ಉಪ್ಪು ಬಳಸುತ್ತಾರೆ. ಮೊಸರಿನ ಜೊತೆ ಯಾವುದು ಬಳಸಿದರೆ ಬೆಸ್ಟ್?
credit: social media
ಆಯುರ್ವೇದದ ಪ್ರಕಾರ ಮೊಸರು ಆಮ್ಲೀಯ ಗುಣವನ್ನು ಹೊಂದಿದೆ.
ಮೊಸರು ಕಫ, ವಾತ, ಪಿತ್ತ ಹೆಚ್ಚಿಸುವ ಗುಣ ಹೊಂದಿದೆ ಎನ್ನುತ್ತದೆ ಆಯುರ್ವೇದ.
ಹೀಗಾಗಿ ಉಪ್ಪು ಹಾಕಿದರೆ ಕಫ, ವಾತ, ಪಿತ್ತದ ಅಂಶ ಹೆಚ್ಚಾಗುವ ಸಾಧ್ಯತೆಗಳಿವೆ.
ಸಕ್ಕರೆ ಹಾಕಿ ಮೊಸರು ಸೇವಿಸಿದರೆ ಪಿತ್ತದ ಅಂಶ ಕಡಿಮೆಯಾಗುವಂತೆ ನೋಡಿಕೊಳ್ಳುತ್ತದೆ.
ಪಿತ್ತ, ಕಫ, ವಾತ ಮೂರನ್ನೂ ನಿಯಂತ್ರಿಸಲು ಸಕ್ಕರೆ ಹಾಕಿ ಮೊಸರು ಸೇವಿಸುವುದು ಉತ್ತಮ.
ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದರಿಂದ ಮೆದುಳಿಗೆ ಗ್ಲುಕೋಸ್ ಪೂರೈಕೆ ಹೆಚ್ಚಿಸುತ್ತದೆ.