ಪ್ರತಿನಿತ್ಯ ತಲೆಸ್ನಾನ ಮಾಡುವುದು ಅಪಾಯಕಾರಿಯೇ

ಕೆಲವರಿಗೆ ಪ್ರತಿನಿತ್ಯ ತಲೆಸ್ನಾನ ಮಾಡದೇ ಇದ್ದರೆ ಏನೋ ಕಿರಿ ಕಿರಿ ಎನಿಸುತ್ತದೆ. ಆದರೆ ನಾವು ಪ್ರತಿನಿತ್ಯ ತಲೆಸ್ನಾನ ಮಾಡುವುದು ಅಪಾಯಕಾರಿಯೇ, ಎಷ್ಟು ದಿನಕ್ಕೊಮ್ಮೆ ತಲೆಸ್ನಾನ ಮಾಡುವುದು ಸೂಕ್ತ ನೋಡೋಣ.

Photo Credit: Instagram, Facebook

ತಲೆಸ್ನಾನ ಮಾಡುವುದರಿಂದ ತಲೆಹೊಟ್ಟು, ಕೊಳೆ ಹೋಗಿ ಕೂದಲು ಹಗುರವಾಗುತ್ತದೆ

ಆದರೆ ಜಿಡ್ಡುಯುಕ್ತ ಕೂದಲಿರುವ ಹೆಣ್ಣುಮಕ್ಕಳು ಎರಡು ದಿನಕ್ಕೊಮ್ಮೆ ತಲೆಸ್ನಾನ ಮಾಡುವುದು ಸೂಕ್ತ

ಡ್ರೈ ಕೂದಲು ಇರುವವರು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಸ್ನಾನ ಮಾಡಿದರೆ ಸಾಕು

ಪ್ರತಿನಿತ್ಯ ಶ್ಯಾಂಪೂ ಹಾಕಿ ತಲೆಸ್ನಾನ ಮಾಡುತ್ತಿದ್ದರೆ ಕೂದಲು ಉದುರುವಿಕೆ ಹೆಚ್ಚಬಹುದು

ಒಂದು ವೇಳೆ ಪ್ರತಿನಿತ್ಯ ತಲೆಸ್ನಾನ ಮಾಡಲೇಬೇಕು ಎಂದಾದರೆ ಶ್ಯಾಂಪೂ ಪ್ರಮಾಣ ಕಡಿಮೆ ಮಾಡಿ

ನಿಯಮಿತವಾಗಿ ತಲೆಸ್ನಾನ ಮಾಡದೇ ಇದ್ದರೆ ತಲೆಹೊಟ್ಟು, ಕಣ್ಣುರಿ, ತಲೆನೋವು ಬರಬಹುದು

ತಲೆಸ್ನಾನ ಮಾಡಿದ ಬಳಿಕ ಕೂದಲುಗಳನ್ನು ಸರಿಯಾಗಿ ಒಣಗಿಸಿಕೊಳ್ಳುವುದು ಮುಖ್ಯ