ತೀರಾ ಹಸಿವಾದಾಗ ಇವುಗಳನ್ನು ತಿನ್ನಬೇಡಿ

ಕೆಲವೊಮ್ಮೆ ತೀರಾ ಹಸಿವಾದಾಗ ಏನು ಸಿಕ್ಕರೂ ತಿಂದು ಬಿಡಬೇಕು ಎನಿಸುತ್ತದೆ. ಆದರೆ ಅಂತಹ ಸಂದರ್ಭದಲ್ಲಿಯೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ತೀರಾ ಹಸಿವಿನ ಹೊಟ್ಟೆಗೆ ಈ ಕೆಲವೊಂದು ಆಹಾರ ಸೇವಿಸುವುದು ಉತ್ತಮವಲ್ಲ.

Photo Credit: Social Media

ತೀರಾ ಹಸಿವಾಗುತ್ತಿದೆ ಎಂದು ಖಾಲಿ ಹೊಟ್ಟೆಯಲ್ಲಿದ್ದಾಗ ಸೀಬೆಹಣ್ಣು ತಿಂದರೆ ಹೊಟ್ಟೆನೋವು ಬರಬಹುದು

ಖಾಲಿ ಹೊಟ್ಟೆಯಲ್ಲಿದ್ದಾಗ ಕಾಫಿ, ಟೀ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಗೆ ಕಾರಣವಾಗಬಹುದು

ಸೇಬು ಆರೋಗ್ಯಕ್ಕೆ ಒಳ್ಳೆಯದೇ ಆದರೂ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಒಳ್ಳೆಯದಲ್ಲ

ಮೊಸರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗಬಹುದು

ಟೊಮೆಟೊ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಉರಿ, ಎದೆ ಉರಿ ಬರಬಹುದು

ಮಸಲಾ ಭರಿತ ಅಥವಾ ಕರಿದ ತಿಂಡಿಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಅಸಿಡಿಟಿಯಾಗಬಹುದು

ಸೌತೆಕಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕೆ ಏರಿಕೆಗೆ ಕಾರಣವಾಗಬಹುದು