ಪರಂಗಿ ಹಣ್ಣನ್ನು ಸೇವಿಸುವುದರಿಂದ ಎಷ್ಟು ಆರೋಗ್ಯಕ್ಕೆ ಲಾಭ ಗೊತ್ತಾ?

ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದೆ. ಅಷ್ಟೇ ಪ್ರಮಾಣದ ಆರೋಗ್ಯದ ಲಾಭಗಳನ್ನು ಒಳಗೊಂಡಿರುವ ಪರಂಗಿ ಹಣ್ಣನ್ನು ಮಕ್ಕಳು ದೊಡ್ಡವರು ಮತ್ತು ವಯಸ್ಸಾದವರು ಯಾವುದೇ ಹಿಂಜರಿಕೆಯಿಲ್ಲದೆ ಸೇವನೆ ಮಾಡಬಹುದು.

photo credit social media

ಪರಂಗಿ ಹಣ್ಣಿನ ಸೇವನೆಯಿಂದ ಉಂಟಾಗುವ ಆರೋಗ್ಯದ ಲಾಭಗಳು ಒಂದೆರಡಲ್ಲ. ಮಹಿಳೆಯರಿಗೂ ಕೂಡ ಪರಂಗಿ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಹಲವಾರು ರೀತಿಯಲ್ಲಿ ಪರಂಗಿ ಹಣ್ಣಿನ ಉಪಯೋಗಗಳನ್ನು ನಿರೀಕ್ಷೆ ಮಾಡಬಹುದು.

ಹೃದಯದ ಸಮಸ್ಯೆ, ಮುಟ್ಟಿನ ತೊಂದರೆ, ಕಣ್ಣುಗಳ ಆರೋಗ್ಯ ಹೀಗೆ ಅನೇಕ ವಿಧಗಳಲ್ಲಿ ಪರಂಗಿಹಣ್ಣಿನ ಪಾತ್ರ ನಿಮ್ಮ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಈ ಲೇಖನದಲ್ಲಿ ಪರಂಗಿಹಣ್ಣಿನ ಆರೋಗ್ಯ ಪ್ರಯೋಜನಗಳನ್ನು ಕುರಿತು ಪರಿಚಯ ಮಾಡಿಕೊಡಲಾಗಿದೆ.

ಈಗಾಗಲೇ ಅತಿಯಾದ ಬೊಜ್ಜಿನ ಅಂಶವನ್ನು ತಮ್ಮ ದೇಹದಲ್ಲಿ ಹೊಂದಿ ಹೆಚ್ಚು ತೂಕವನ್ನು ಪಡೆದಿರುವ ಜನರು ಆರೋಗ್ಯಕರವಾದ ದೇಹದ ತೂಕದ ನಿರ್ವಹಣೆಯಲ್ಲಿ ಅನುಕೂಲವಾಗುವಂತೆ ಪರಂಗಿಹಣ್ಣನ್ನು ನಿಯಮಿತವಾಗಿ ಪ್ರತಿದಿನವೂ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

ಹಣ್ಣುಗಳಲ್ಲಿ ಕಂಡುಬರುವ ನೈಸರ್ಗಿಕವಾದ ಸಕ್ಕರೆ ಅಂಶ ಮಧುಮೇಹಿ ರೋಗಿಗಳಿಗೆ ತುಂಬಾ ಒಳ್ಳೆಯದು. ಪರಂಗಿ ಹಣ್ಣು ನಿಮ್ಮ ಅತ್ಯದ್ಭುತ ಆಯ್ಕೆಗಳಲ್ಲಿ ಒಂದಾಗಿದ್ದರೆ ನಿಮ್ಮ ಆರೋಗ್ಯ ಬಹಳಷ್ಟು ಸುಧಾರಿಸುತ್ತದೆ.

ಫ್ಲೇವನಾಯ್ಡ್ ಅಂಶಗಳು ಮತ್ತು ವಿಟಮಿನ್ ಎ ಅಂಶ ಯಥೇಚ್ಛವಾಗಿ ಸಿಗುವ ಕಾರಣದಿಂದ ಕಣ್ಣುಗಳಿಗೆ ಪರಂಗಿಹಣ್ಣು ತುಂಬಾ ಒಳ್ಳೆಯದು ಎಂಬ ಮಾತಿದೆ.

ಕಣ್ಣುಗಳ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮನೆಯಲ್ಲಿ ಇರುವವರು ಕೂಡ ಪರಂಗಿ ಹಣ್ಣಿನ ಸೇವನೆ ಮಾಡಿದರೆ ಬಹಳಷ್ಟು ಬೇಗನೆ ಹುಷಾರಾಗಬಹುದು.

ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳು ಹೆಚ್ಚು ಸಿಗುತ್ತವೆ. ಹಾಗಾಗಿ ಪರಂಗಿ ಹಣ್ಣು ನಿಮ್ಮನ್ನು ಆರ್ಥ್ರೈಟಿಸ್ ಸಮಸ್ಯೆಯಿಂದ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು