ಏಲಕ್ಕಿ ಆಯುರ್ವೇದ ಔಷಧಿಗಳಲ್ಲಿ ಹೇರಳವಾಗಿ ಬಳಸಲಾಗುತ್ತದೆ. ಏಲಕ್ಕಿಯಲ್ಲಿ ಅಷ್ಟೊಂದು ಆರೋಗ್ಯಕರ ಉಪಯೋಗಗಳಿವೆ. ಪ್ರತಿನಿತ್ಯ ಏಲಕ್ಕಿ ನೀರನ್ನು ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಅವು ಯಾವುವು ನೋಡೋಣ.
credit: social media
ಏಲಕ್ಕಿ ನೀರನ್ನು ಪ್ರತಿನಿತ್ಯ ಸೇವಿಸುವುದರಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಯುತ್ತದೆ
ಇದರಲ್ಲಿರುವ ಉರಿಯೂತ ತಡೆ ಗುಣದಿಂದಾಗಿ ಅನೇಕ ಮಾರಕ ರೋಗಗಳಿಗೆ ಪರಿಹಾರ ಸಿಗುತ್ತದೆ
ಏಲಕ್ಕಿಯಲ್ಲಿ ಜೀರ್ಣ ಸುಗಮಗೊಳಿಸುವ ಗುಣವಿದ್ದು ನೀರು ಸೇವಿಸುವುದರಿಂದ ಅಜೀರ್ಣವಾಗದು
ಬಾಯಿ ವಾಸನೆ ಸಮಸ್ಯೆ ಹೊಂದಿದ್ದರೆ ಪ್ರತಿನಿತ್ಯ ಏಲಕ್ಕಿ ನೀರು ಸೇವನೆ ಮಾಡುವುದನ್ನು ಅಭ್ಯಾಸ ಮಾಡಿ
ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಕಾರಣ ಏಲಕ್ಕಿ ನೀರು ಸೋಂಕುಗಳಾಗದಂತೆ ತಡೆಗಟ್ಟುತ್ತದೆ.
ಪ್ರತಿನಿತ್ಯ ಏಲಕ್ಕಿ ನೀರು ಸೇವಿಸುವುದರಿಂದ ಉಸಿರಾಟ ಸುಧಾರಿಸುತ್ತದೆ ಮತ್ತು ಶ್ವಾಸಕೋಶಕ್ಕೂ ಉತ್ತಮ
ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ