ಕೊಬ್ಬು ಇಳಿಸಬೇಕಾದರೆ ಇದನ್ನು ಸೇವಿಸಿ

ದೇಹದಲ್ಲಿ ಬೇಡದ ಕೊಬ್ಬು ತುಂಬಿದರೆ ಶರೀರ ರೋಗದ ಗೂಡಾಗುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಕೊಬ್ಬು ಕರಗಿಸಬೇಕಾದರೆ ಈ ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಅವು ಯಾವುವು ನೋಡೋಣ.

credit: social media

ಜಿರ್ಣಕ್ರಿಯೆಯನ್ನು ಸುಲಭವಾಗಿಸಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ನಿಂಬೆ ರಸ ಮತ್ತು ನೀರು ಕುಡಿಯಿರಿ.

ಚಯಾಪಚಯ ವೇಗಗೊಳಿಸಲು ಮತ್ತು ಬೇಡದ ಕ್ಯಾಲೊರಿ ಸುಡಲು ಗ್ರೀನ್ ಚಹಾ ತಪ್ಪದೇ ಸೇವಿಸಿ.

ಅತಿಯಾಗಿ ತಿನ್ನುವ ಖಯಾಲಿಗೆ ಕಡಿವಾಣ ಹಾಕಿ ಇನ್ಷುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಆಪಲ್ ಸೈಡ್ ವಿನೇಗರ್ ಬಳಸಿ

ಥರ್ಮೋಜೆನೆಸಿಸ್ ಉತ್ತೇಜಿಸಿ, ಉರಿಯೂತವನ್ನು ಕಡಿಮೆ ಮಾಡಲು ಶುಂಠಿ ಚಹಾ ದಿನನಿತ್ಯ ಸೇವಿಸಿ.

ಉರಿಯೂತವನ್ನು ಕಡಿಮೆ ಮಾಡಿ ತೂಕ ಇಳಿಸಲು ಮತ್ತು ಆರೋಗ್ಯವಾಗಿರಲು ಸಹಾಯ ಮಾಡುವ ಅರಶಿನ ಹಾಲು ಬಳಸಿ.

ದೇಹವನ್ನು ಹೈಡ್ರೇಟ್ ಮಾಡಿ ಬೇಡದ ಕೊಬ್ಬು ಕರಗಿಸಲು ಪುದಿನಾ ಮತ್ತು ಸೌತೆಕಾಯಿ ಸೇರಿಸಿದ ನೀರು ಬಳಸಿ.

ಸಕ್ಕರೆ ನಿಯಂತ್ರಣದಲ್ಲಿರಿಸಿ ಬೇಡದ ಕೊಬ್ಬು ನಾಶಪಡಿಸಲು ದಾಲ್ಚಿನ್ನಿ ಮತ್ತು ಜೇನುತುಪ್ಪ ಬೆರೆಸಿದ ನೀರು ಸೇವಿಸಿ.