ಈ ಐದು ಡ್ರೈ ಫ್ರೂಟ್ ತಿಂದರೆ ಬೇಗನೇ ತೂಕ ಇಳಿಯುತ್ತೆ

ತೂಕ ಇಳಿಕೆಗೆ ನಾನಾ ಸರ್ಕಸ್ ಮಾಡುವವರು ಡ್ರೈ ಫ್ರೂಟ್ ಸೇವನೆಯಿಂದ ಎಂಥಾ ಲಾಭವಿದೆ ಎಂದು ತಿಳಿಯಬೇಕು. ತ್ವರಿತವಾಗಿ ತೂಕ ಇಳಿಕೆ ಮಾಡುವವರು ಈ ಐದು ಡ್ರೈ ಫ್ರೂಟ್ ಗಳನ್ನು ಸೇವನೆ ಮಾಡುತ್ತಿದ್ದರೆ ಬೇಗನೇ ಫಲ ಕಾಣಬಹುದು.

credit: social media

ತ್ವರಿತವಾಗಿ ತೂಕ ಇಳಿಸಲು ಡ್ರೈ ಫ್ರೂಟ್ ಗಳನ್ನು ನಿಯಮಿತವಾಗಿ ಸೇವಿಸುವುದು ಅಗತ್ಯ.

ಒಣ ಹಣ್ಣುಗಳಲ್ಲಿ ಕಡಿಮೆ ಕ್ಯಾಲೊರಿಯಿದ್ದು, ಇದನ್ನು ಸೇವಿಸುವುದು ತೂಕ ಇಳಿಕೆಗೆ ಸಹಕಾರಿ.

ಪ್ರೊಟೀನ್ ಮತ್ತು ಆರೋಗ್ಯಕರ ಕೊಬ್ಬಿನಂಶವಿರುವ ಡ್ರೈ ಫ್ರೂಟ್ ಗಳು ಬಾಯಿ ಚಪಲ ಕಡಿಮೆ ಮಾಡಿ ತೂಕ ಇಳಿಕೆಗೆ ಸಹಕಾರಿ.

ಚಿಯಾ ಸೀಡ್ ಗಳನ್ನು ಸೇವಿಸುವುದರಿಂದ ಬೇಗನೇ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ಏಪ್ರಿಕೋಟ್ ಮತ್ತು ಒಣದ್ರಾಕ್ಷಿ ಸೇವಿಸುವುದರಿಂದ ನೈಸರ್ಗಿಕ ಮತ್ತು ಸಿಹಿ ಮತ್ತು ಫೈಬರ್ ಅಂಶ ಸಿಗುತ್ತದೆ.

ಬಿಸಿಲಿಗೆ ಒಣಗಿಸಿದ ಟೊಮೆಟೊದಲ್ಲಿ ಕ್ಯಾಲೊರಿ ಕಡಿಮೆಯಿದ್ದು, ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುತ್ತದೆ.

ಗಮನಿಸಿ, ಯಾವುದೇ ಪ್ರಯೋಗ ಮಾಡುವ ಮೊದಲು ವೈದ್ಯರನ್ನು ಸಲಹೆ ಪಡೆಯಿರಿ.