ಬ್ಯಾಚುಲರ್ಸ್ ಅಡುಗೆ ಎಂದರೆ ಫಟಾಫಟ್ ಅಂತ ಸುಲಭವಾಗಿ ಆಗಿಬಿಡಬೇಕು. ಹೆಚ್ಚು ಅಡುಗೆ ಗೊತ್ತಿಲ್ಲದ ಬ್ಯಾಚುಲರ್ಸ್ ಗಳೂ ಸುಲಭವಾಗಿ ಮಾಡಬಹುದಾದ ಈರುಳ್ಳಿ ಗೊಜ್ಜು ಮಾಡುವುದು ಹೇಗೆ ಎಂದು ಇಂದು ನೋಡೋಣ.
Photo Credit: Social Media
ಒಂದು ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಹುಣೆಸೆ ರಸ, ಬೆಲ್ಲ, ಉಪ್ಪು, ಒಗ್ಗರಣೆಗೆ ಸಾಸಿವೆ, ಕರಿಬೇವು, ಎಣ್ಣೆ ಬೇಕು
ಮೊದಲು ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಪಾತ್ರೆಯಲ್ಲಿ ಹಾಕಿಡಿ
ಹುಣಸೆ ಹುಳಿಯನ್ನು ಚೆನ್ನಾಗಿ ಕಿವುಚಿ ರಸ ಮಾಡಿಕೊಂಡು ಕತ್ತರಿಸಿದ ಈರುಳ್ಳಿಗೆ ಸೇರಿಸಿ
ಇದಕ್ಕೆ ಬೇರೆ ನೀರು ಬೇಕಾಗಿಲ್ಲ, ಹುಣಸೆ ರಸವನ್ನೇ ಗೊಜ್ಜು ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ನೀರು ಮಾಡಿಕೊಳ್ಳಿ
ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲವನ್ನು ತುರಿದು ಹಾಕಿ ಚೆನ್ನಾಗಿ ಕದಡಿಕೊಳ್ಳಿ
ಇದಕ್ಕೆ ಸಾಸಿವೆ, ಕರಿಬೇವಿನೊಂದಿಗೆ ಎಣ್ಣೆ ಹಾಕಿ ಒಗ್ಗರಣೆ ಮಾಡಿ ಗೊಜ್ಜಿಗೆ ಹಾಕಿ
ಈಗ ರುಚಿಕರ ದಿಡೀರ್ ಬ್ಯಾಚುಲರ್ಸ್ ಗಳೂ ಮಾಡಬಹುದಾದ ಸುಲಭ ಈರುಳ್ಳಿ ಗೊಜ್ಜು ಸವಿಲು ಸಿದ್ದ