ಚಪಾತಿ, ಪೂರಿ, ಅನ್ನಕ್ಕೂ ಕಲಸಿಕೊಂಡು ತಿನ್ನಬಹುದಾದ ಆಲೂಗಡ್ಡೆ ಗ್ರೇವಿ ಮಾಡುವುದು ಹೇಗೆ ಎಂದು ಇಂದು ನೋಡೋಣ. ಕೇವಲ ಎರಡೇ ಎರಡು ಆಲೂಗಡ್ಡೆಯಿದ್ದರೂ ಈ ಗ್ರೇವಿ ಮಾಡಬಹುದು. ಇದನ್ನು ಮಾಡುವುದು ಹೇಗೆ ಇಲ್ಲಿ ನೋಡಿ.
Photo Credit: Instagram
ಎರಡು ಆಲೂಗಡ್ಡೆ, ಒಂದು ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಪ್ರಮುಖವಾಗಿ ಬೇಕಾಗುವುದು
ಮೊದಲಿಗೆ ಆಲೂಗಡ್ಡೆಯನ್ನು ಎರಡು ಹೋಳು ಮಾಡಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ
ಈಗ ಒಂದು ಬಾಣಲೆಗೆ ಕಡಲೆ ಬೇಳೆ, ಜೀರಿಗೆ ಮತ್ತು ಸಾಸಿವೆ ಹಾಕಿ ಒಗ್ಗರಣೆ ಕೊಡಿ
ಇದಕ್ಕೆ ಹೆಚ್ಚಿಟ್ಟ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ
ಇದಕ್ಕೆ ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಬಳಿಕ ಬೇಯಿಸಿದ ಅಲೂಗಡ್ಡೆಯನ್ನು ಸ್ಮಾಶ್ ಮಾಡಿ ಇದಕ್ಕೆ ಸೇರಿಸಿ ಉಪ್ಪು ಹಾಕಿ
ಈಗ ಇದಕ್ಕೆ ಅರ್ಧಗ್ಲಾಸ್ ನಷ್ಟು ನೀರು ಮತ್ತು ಎರಡು ಸ್ಪೂನ್ ಕಡಲೆಹಿಟ್ಟು ಸೇರಿಸಿ ಕುದಿಯಲು ಬಿಡಿ