ಬಾತ್ ರೂಂನ ಬಕೆಟ್ ಕೊಳೆಯಾಗಿದ್ದರೆ ಹೀಗೆ ಮಾಡಿ

ಬಾತ್ ರೂಂನಲ್ಲಿ ಬಳಸುವ ಪ್ಲಾಸ್ಟಿಕ್ ಬಕೆಟ್ ಗಳಲ್ಲಿ ತುಂಬಾ ಸಮಯದವರೆಗೆ ನೀರು ತುಂಬಿಟ್ಟುಕೊಂಡಿದ್ದರೆ ಅದು ಕೆಲವು ಸಮಯದ ನಂತರ ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತದೆ. ಪ್ಲಾಸ್ಟಿಕ್ ಬಕೆಟ್ ಹೀಗಾದಾಗ ಅದನ್ನು ಕ್ಲೀನ್ ಮಾಡುವುದು ಹೇಗೆ ನೋಡಿ.

Photo Credit: Social Media

ಪ್ಲಾಸ್ಟಿಕ್ ಬಕೆಟ್ ಗೆ ನೀರಿನಲ್ಲಿರುವ ಕೊಳೆ ತಾಗಿ ಕಪ್ಪಗಾದರೆ ಮೊದಲಿನ ಹೊಳಪು ಮೂಡಿಸಬಹುದು

ಬಾತ್ ರೂಂ ಟೈಲ್ಸ್ ಶುಚಿಗೊಳಿಸಲು ಬಳಸುವ ಲಿಕ್ವಿಡ್ ನ್ನು ಬಕೆಟ್ ಗೆ ಹಾಕಿ ನಂತರ ತೊಳೆಯಿರಿ

ಬಾತ್ ರೂಂ ತೊಳೆಯಲು ಬಳಸುವ ಆಸಿಡ್ ನ್ನು ನೀರಿಗೆ ಮಿಶ್ರಣ ಮಾಡಿ ಕೆಲವು ಹೊತ್ತು ನೆನೆಯಲು ಬಿಡಿ

ನಿಂಬೆ ಹಣ್ಣಿನ ಹೋಳಿನಿಂದ ಪ್ಲಾಸ್ಟಿಕ್ ಬಕೆಟ್ ನ್ನು ಚೆನ್ನಾಗಿ ಉಜ್ಜಿ ತೊಳೆದುಕೊಂಡರೆ ಕೊಳೆ ನಾಶವಾಗುತ್ತದೆ

ವಿನೇಗರ್ ದ್ರಾವಣ ಮಾಡಿ ಪ್ಲಾಸ್ಟಿಕ್ ವಸ್ತುವನ್ನು ಅರ್ಧಗಂಟೆ ನೆನೆಸಿ ನಂತರ ತೊಳೆಯಿರಿ

ಬೇಕಿಂಗ್ ಪೌಡರ್ ನ್ನು ನೀರಿಗೆ ಹಾಕಿ ಪ್ಲಾಸ್ಟಿಕ್ ವಸ್ತುವನ್ನು ಚೆನ್ನಾಗಿ ತೊಳೆದುಕೊಂಡರೆ ಸಾಕು

ಬಾತ್ ರೂಂ ತೊಳೆಯಲು ಬಳಸುವ ಬ್ಲೀಚಿಂಗ್ ಪೌಡರ್ ನಿಂದ ಬಕೆಟ್, ಮಗ್ ತೊಳೆದುಕೊಳ್ಳಬಹುದು