ಪ್ರತಿಯೊಬ್ಬರ ಮನೆಯ ಮುಂದೆಯೂ ತುಳಸಿ ಗಿಡ ಇದ್ದೇ ಇರುತ್ತದೆ. ಧಾರ್ಮಿಕ ಉದ್ದೇಶಕ್ಕೋ, ಔಷಧೀಯ ಉದ್ದೇಶಕ್ಕೋ ಒಟ್ಟಿನಲ್ಲಿ ತುಳಸಿ ಗಿಡ ಮನೆಯಲ್ಲಿದ್ದರೆ ಉತ್ತಮ. ತುಳಸಿ ಗಿಡ ಚೆನ್ನಾಗಿ ಬೆಳೆಯಬೇಕೆಂದರೆ ಈ ಟಿಪ್ಸ್ ಪಾಲಿಸಬೇಕು.
Photo Credit: Social Media
ತುಳಸಿ ಗಿಡದಲ್ಲಿ ಎಲೆಗಳು ಬಾಡಿ ಬಿಳಿ ಬಿಳಿಯಾದಂತೆ ಕಣ್ಣಿಗೂ ಕಾಣಿಸದಂತಹ ಹುಳ ಅಥವಾ ಫಂಗಸ್ ಆಗುತ್ತದೆ
ಎಲೆಗಳು ಮುದುರಿಕೊಳ್ಳುವ ರೋಗ ಬಂದಾಗ ಎಲೆಗಳಿಗೆ ಕಹಿಬೇವಿನ ಕಷಾಯವನ್ನು ಸ್ಪ್ರೇ ಮಾಡಿ
ತುಳಸಿ ನೆಟ್ಟ ಪಾಟ್ ನ ಮಣ್ಣು ಹಳತಾಗಿದ್ದರೆ ಅಥವಾ ಒಣಗಿದಂತಾಗಿದ್ದರೆ ಅದನ್ನು ತಕ್ಷಣವೇ ಬದಲಾಯಿಸಿ
ತುಳಸಿ ಗಿಡವಿರುವ ಪಾಟ್ ನಲ್ಲಿ ನೀರು ಹೋಗಲು ಜಾಗವಿಲ್ಲದೇ ಇದ್ದಾಗ ಗಿಡ ಕೊಳೆತು ಹೋಗಬಹುದು
ತುಳಸಿ ಗಿಡ ಬಾಡಿದಂತಾಗಿದ್ದರೆ ಅದಕ್ಕೆ ಸ್ವಲ್ಪ ಈರುಳ್ಳಿ ಸಿಪ್ಪೆಯನ್ನು ಕುದಿಸಿದ ನೀರನ್ನು ಸ್ಪ್ರೇ ಮಾಡಿ
ತುಳಸಿ ಎಲೆಗಳು ಹುಳಗಳಿಂದ ಬಾಧಿತವಾಗುತ್ತಿದ್ದರೆ ಅದಕ್ಕೆ ಬೆಳ್ಳುಳ್ಳಿ ನೀರು ಸ್ಪ್ರೇ ಮಾಡಬಹುದು
ತುಳಸಿ ಗಿಡದ ಪಾಟ್ ಗೆ ಗೊಬ್ಬರ ಅಥವಾ ದನದ ಸೆಗಣಿ ಹಾಕಿದರೆ ಅತ್ಯುತ್ತಮವಾಗಿ ಬೆಳೆಯುತ್ತದೆ