ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಸುಲಭ ಟ್ರಿಕ್ಸ್

ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ತುಂಬಾ ಸಮಯ ವ್ಯರ್ಥವಾಗುತ್ತಿದೆಯೇ? ಹಾಗಿದ್ದರೆ ಈ ಕೆಲವು ಟ್ರಿಕ್ಸ್ ಗಳನ್ನು ಬಳಸಿ ಬೇಗನೇ ಮತ್ತು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯಬಹುದು.

Photo Credit: Instagram, WD

ಬೆಳ್ಳುಳ್ಳಿ ಒಂದು ಗಡ್ಡೆಯನ್ನು ತೆಗೆದುಕೊಂಡು ಮೇಲಿನಿಂದ ಭಾರದ ವಸ್ತು ಇಟ್ಟು ಒಮ್ಮೆ ಪ್ರೆಸ್ ಮಾಡಿ

ಇದರಿಂದ ಬಹಳ ಬೆಳ್ಳುಳ್ಳಿ ಸಿಪ್ಪೆ ಬಹಳ ಬೇಗನೇ ತೆಗೆಯಲು ಸಾಧ್ಯವಾಗುತ್ತದೆ

ಬೆಳ್ಳುಳ್ಳಿ ಚೆನ್ನಾಗಿ ಒಣಗಿಸಿ ಬಳಿಕ ಒಂದು ಡಬ್ಬಕ್ಕೆ ಹಾಕಿ ಚೆನ್ನಾಗಿ ಕಲಕಿದರೆ ಬೇಗನೇ ಸಿಪ್ಪೆ ಹೋಗುತ್ತದೆ

ಬೆಳ್ಳುಳ್ಳಿಯನ್ನು ಎಸಳು ಮಾಡಿಕೊಂಡು ಅದರ ತುದಿ ಭಾಗ ಕಟ್ ಮಾಡಿದರೆ ಬೇಗನೇ ಸಿಪ್ಪೆ ತೆಗೆಯಬಹುದು

ಒಂದು ಬೌಲ್ ನಲ್ಲಿ ಬಿಸಿ ನೀರು ತೆಗೆದುಕೊಂಡು ಅದರಲ್ಲಿ ಬೆಳ್ಳುಳ್ಳಿಯನ್ನು 10 ನಿಮಿಷ ಅದ್ದಿಡಿ

ಬೆಳ್ಳುಳ್ಳಿ ಗಡ್ಡೆ ಸಮೇತ ನೀರಿಗೆ ಹಾಕಿ ಒಲೆಯಲ್ಲಿಟ್ಟು ಒಂದು ಕುದಿ ಕುದಿಸಿದರೆ ಬೇಗನೇ ಸಿಪ್ಪೆ ತೆಗೆಯಬಹುದು

ಬೆಳ್ಳುಳ್ಳಿಯ ಎಸಳುಗಳನ್ನು ಅಡ್ಡಕೆ ಸೀಳಿದರೆ ಸಿಪ್ಪೆ ಸುಲಭವಾಗಿ ತೆಗೆಯಬಹುದು