ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿಂದರೆ, ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ನಮ್ಮಲ್ಲಿ ಬಹುತೇಕ ಜನರಿಗೆ ಬೆಳಗಿನ ಉಪಹಾರದ ಸಮಯದಲ್ಲಿ ಕೋಳಿ ಮೊಟ್ಟೆ ತಿನ್ನುವ ಅಭ್ಯಾಸ ವಿರುತ್ತದೆ. ಇದು ಕೇವಲ ರುಚಿ ನೀಡುತ್ತದೆ ಎನ್ನುವ ಕಾರಣಕ್ಕೆ ಯಾರು ಸಹ ಸೇವನೆ ಮಾಡುವುದಿಲ್ಲ.
photo credit social media
ಇದರಲ್ಲಿರುವ ಪ್ರೊಟೀನ್ ಅಂಶ ಮತ್ತು ಇತರ ಕೆಲವು ಆರೋಗ್ಯಕರ ಪ್ರಯೋಜನಗಳ ಕಾರಣದಿಂದ ಇದನ್ನು ಸೇವನೆ ಮಾಡುತ್ತಾರೆ.
ವೈದ್ಯಲೋಕದ ಪ್ರಕಾರ ಮನುಷ್ಯನ ದೇಹಕ್ಕೆ ಅವಶ್ಯವಾಗಿ ಬೇಕಾಗಿರುವ ಕೊಲೆಸ್ಟ್ರಾಲ್ ಅಂಶ ಎಂದರೆ ಅದು ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಅಥವಾ ಹೈ - ಡೆನ್ಸಿಟಿ ಲಿಪಾಪ್ರೋಟೀನ್. ಇದನ್ನು ಹೆಚ್ ಡಿ ಎಲ್ ಎಂತಲೂ ಕರೆಯುತ್ತಾರೆ.
ಯಾವ ವ್ಯಕ್ತಿಗೆ ಹೆಚ್ ಡಿ ಎಲ್ ಮಟ್ಟ ಹೆಚ್ಚಾಗಿರುವುದೋ ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಸಮಸ್ಯೆ ಮತ್ತು ಇನ್ನಿತರ ಪ್ರಮುಖ ಕಾಯಿಲೆಗಳು ಹತ್ತಿರ ಕೂಡ ಸುಳಿಯುವುದಿಲ್ಲ.
ಒಂದು ಅಧ್ಯಯನದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಆರು ವಾರಗಳ ತನಕ ಒಂದು ದಿನಕ್ಕೆ ಎರಡರಂತೆ ಮೊಟ್ಟೆಗಳನ್ನು ಸೇವಿಸುತ್ತಾ ಬಂದರೆ ಆತನ ರಕ್ತದಲ್ಲಿ ಸುಮಾರು ಶೇಕಡ 10 % ನಷ್ಟು ಹೆಚ್ ಡಿ ಎಲ್ ಅಂಶ ಹೆಚ್ಚಾಗುತ್ತದೆ.
ನಮ್ಮ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಮೊದಲು ನಾವು ಸೇವಿಸುವ ಆಹಾರದಲ್ಲಿ ಪ್ರೊಟೀನ್ ಅಂಶಗಳು ಹೆಚ್ಚಿರಬೇಕು. ಮೊಟ್ಟೆಗಳ ವಿಷಯಕ್ಕೆ ಬಂದರೆ ಒಂದು ಸಾಧಾರಣ ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ಗಳಷ್ಟು ಪ್ರೋಟೀನ್ ಅಂಶ ಸೇರಿದೆ ಜೊತೆಗೆ ಸಾಕಷ್ಟು ಅಮೈನೋ ಆಮ್ಲಗಳ ಅಂಶ ಕೂಡ ಸೇರಿದೆ.
ಪ್ರತಿ ದಿನ ಇಷ್ಟು ಮಟ್ಟದ ಪ್ರೋಟಿನ್ ಅಂಶಗಳನ್ನು ನಮ್ಮ ದೇಹಕ್ಕೆ ಸೇರಿಸುತ್ತಾ ಹೋದರೆ ನಮ್ಮ ಮಾಂಸ ಖಂಡಗಳು ಚೆನ್ನಾಗಿ ರೂಪುಗೊಂಡು, ರಕ್ತದ ಒತ್ತಡ ಕಡಿಮೆಯಾಗಿ, ಮೂಳೆಗಳ ಆರೋಗ್ಯ ಉತ್ತಮಗೊಂಡು ತೂಕ ನಿರ್ವಹಣೆಯಲ್ಲಿ ಸಹಾಯಕವಾಗುತ್ತದೆ.
ಕೆಲವೊಂದು ಸಂಶೋಧನೆಗಳು ತಿಳಿಸಿರುವಂತೆ ಯಾರಿಗೆ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಎಂದು ಕರೆಸಿಕೊಳ್ಳುವ ಮಧುಮೇಹದ ಸಮಸ್ಯೆ ಇದೆಯೋ ಅಂಥವರು ಮೊಟ್ಟೆಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳುತ್ತಾರೆ ಎಂದು ಕಂಡು ಬಂದಿದೆ.