ಹೆಲ್ತಿ ಮಗು ಬೇಕಿದ್ದರೆ ಈ ಆಹಾರ ಸೇವಿಸಿ

ಪ್ರತಿಯೊಬ್ಬರಿಗೂ ತಮಗೆ ಹುಟ್ಟುವ ಮಗು ಆರೋಗ್ಯವಾಗಿರಬೇಕು ಎಂದಿರುತ್ತದೆ. ಅದಕ್ಕಾಗಿ ಏನೇನೋ ಸರ್ಕಸ್ ಮಾಡುತ್ತಾರೆ. ಆದರೆ ಹುಟ್ಟುವ ಮಗು ಆರೋಗ್ಯವಾಗಿರಬೇಕಾದರೆ ನಾವು ನಮ್ಮ ಆಹಾರದಲ್ಲಿ ಈ ಐಟಂಗಳನ್ನು ಸೇರಿಸಲೇಬೇಕು.

credit: social media

ಗರ್ಭಿಣಿಯಾಗಿರುವಾಗ ಆರೋಗ್ಯಕರ ಆಹಾರ ಸೇವನೆ ಮಾಡಲೇಬೇಕು

ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿರಬೇಕು

ಮಗುವಿನ ನರವ್ಯೂಹದ ಬೆಳವಣಿಗೆಗೆ ಸೊಪ್ಪು ತರಕಾರಿಗಳನ್ನು ಸೇವಿಸಬೇಕು

ಪೋಷಕಾಂಶಯುಕ್ತ ಮೀನು ಮತ್ತು ಅಮಿನೊ ಆಸಿಡ್ ಅಂಶ ಒದಗಿಸುವ ಆಹಾರವಿರಬೇಕು

ಕಾರ್ಬೋಹೈಡ್ರೇಟ್, ವಿಟಮಿನ್ ಬಿ ಒದಗಿಸುವ ಗೋಧಿ, ಕೆಂಪಕ್ಕಿ ಸೇವಿಸಿ

ಮಗುವಿಗೆ ವಿಟಮಿನ್ ಡಿ, ಕ್ಯಾಲ್ಶಿಯಂ ಸಿಗಲು ಡೈರಿ ಉತ್ಪನ್ನಗಳನ್ನು ಸೇವಿಸಿ

ರೋಗನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಅಂಶವಿರುವ ಹಣ್ಣುಗಳನ್ನು ಸೇವಿಸಬೇಕು